ಬೆಳಗ್ಗೆ ಸಭೆ, ಸಂಜೆ ವೇಳೆಗೆ 11 IPS ಅಧಿಕಾರಿಗಳ ದಿಢೀರ್ ಎತ್ತಂಗಡಿ

By Web DeskFirst Published Aug 1, 2019, 7:35 PM IST
Highlights

ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಮೊದಲ ಟ್ರಾನ್ಸ್ ಫರ್|  ಪೊಲೀಸ್ ಇಲಾಖೆಗೆ ಯಡಿಯೂರಪ್ಪ ಸರ್ಕಾರ ಭರ್ಜರಿ ಸರ್ಜರಿ| 11 IPS ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು, [ಆ.01]: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಆಗಿದ್ದು, ಬರೋಬ್ಬರಿ 11 ಮಂದಿ ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹಿಂದು ಕಾರ್ಯಕರ್ತರ ಮೇಲೆ ದಾಖಲಾಗಿದ್ದ ಕೇಸ್ ವಾಪಸ್ ಪಡೆದ BSY ಸರ್ಕಾರ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳತ್ತ ಚಿತ್ತ ಹರಿಸಿದ್ದ ಯಡಿಯೂರಪ್ಪನವರು, ಗುರುವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರು ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದರು. 

ಆದ್ರೆ ಸಂಜೆ ವೇಳೆಗೆ ರಾಜ್ಯ ಸರ್ಕಾರ 11 ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿರುವುದು ಭಾರೀ ಕುತೂಹಲ ಮೂಡಿಸಿದೆ.ಯಡಿಯೂರಪ್ಪ ಸಿಎಂ ಆದ ಮೇಲೆ ಇದು ಮೊದಲ ವರ್ಗಾವಣೆಯಾಗಿದೆ.

11 IPS ಅಧಿಕಾರಿಗಳ ವರ್ಗಾವಣೆ ಪಟ್ಟಿ ಇಂತಿದೆ
* ಅಮರ್​ ಕುಮಾರ್​ ಪಾಂಡೆ - ಎಡಿಜಿಪಿ, ಕಾನೂನು ಸುವ್ಯವಸ್ಥೆ
* ಕಮಲ್​ ಪಂತ್​ - ಎಡಿಜಿಪಿ, ಗುಪ್ತಚರ ಇಲಾಖೆ
* ಬಿ.ದಯಾನಂದ್​ - ಐಜಿಪಿ, ಕೆಎಸ್​ಆರ್​​ಪಿ
* ಎಂ.ಚಂದ್ರಶೇಖರ್​ - ಐಜಿಪಿ, ಎಸಿಬಿ
* ಸುಬ್ರಹ್ಮಣ್ಯೇಶ್ವರ ರಾವ್​ - ಮಂಗಳೂರು ಪೊಲೀಸ್ ಆಯುಕ್ತ
* ಸಂದೀಪ್​ ಪಾಟೀಲ್​ - ಜಂಟಿ ಪೊಲೀಸ್​ ಆಯುಕ್ತ, ಸಿಸಿಬಿ, ಬೆಂಗಳೂರು
* ಸಿದ್ದರಾಮಪ್ಪ - ಆಯುಕ್ತರು, ಮಾಹಿತಿ & ಸಾರ್ವಜನಿಕ ಸಂಪರ್ಕ ವಿಭಾಗ
* ಚೇತನ್​ ಸಿಂಗ್​ ರಾಥೋಡ್​ - ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
* ಕೆ.ಎಂ.ಶಾಂತರಾಜು - ಎಸ್​ಪಿ, ಶಿವಮೊಗ್ಗ ಜಿಲ್ಲೆ
*ಹನುಮಂತರಾಯ - ಎಸ್​ಪಿ, ದಾವಣಗೆರೆ ಜಿಲ್ಲೆ
* ಅನೂಪ್​ ಶೆಟ್ಟಿ - ಎಸ್​​ಪಿ, ರಾಮನಗರ
* ಇತ್ತೀಚೆಗೆ ಸಿಸಿಬಿಗೆ ವರ್ಗಾವಣೆಯಾಗಿದ್ದ ರವಿಕಾಂತೇಗೌಡ ಎತ್ತಂಗಡಿ
* ಬೆಂಗಳೂರು ಕೇಂದ್ರ ವಿಭಾಗದ ದೇವರಾಜ್​ ವರ್ಗಾವಣೆ
* ರವಿಕಾಂತೇಗೌಡ, ದೇವರಾಜ್​​ ಅವರಿಗೆ ಹುದ್ದೆ ತೋರಿಸದ ಸರ್ಕಾರ.

click me!