
ನವದೆಹಲಿ: ಬಿಜೆಪಿ ಹಾಗೂ ಅದರ ನೀತಿಗಳನ್ನು ಟೀಕಿಸುತ್ತಿದ್ದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್ ಸಿನ್ಹಾ ಹೊಸ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿದ್ದಾರೆ.
ನೂತನ ಸಂಘಟನೆಗೆ ‘ರಾಷ್ಟ್ರ ಮಂಚ್’ ಎಂಬ ಹೆಸರನ್ನಿಡಲಾಗಿದ್ದು, ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಕೂಡಾ ಅದಕ್ಕೆ ಸೇರ್ಪಡೆಯಾಗಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ಅದರ ಜನವಿರೋಧಿ ನೀತಿಗಳ ವಿರುದ್ಧ ಚಳುವಳಿ ನಡೆಸುವುದಾಗಿ ಯಶವಂತ್ ಸಿನ್ಹಾ ಈ ಸಂದರ್ಭದಲ್ಲಿ ಹೇಳಿದ್ದಾರೆ.
ದೇಶದ ಇಂದಿನ ಪರಿಸ್ಥಿತಿಯನ್ನು 70 ವರ್ಷಗಳ ಹಿಂದೆ ಗಾಂಧೀಜಿಯ ಹತ್ಯೆಯಾದ ಪರಿಸ್ಥಿತಿಗೆ ಹೋಲಿಸಿದ ಯಶವಂತ್ ಸಿನ್ಹಾ, ಪ್ರಜಾಪ್ರಭುತ್ವ ಹಾಗೂ ಅದರ ಅಧೀನ ಸಂಸ್ಥೆಗಳು ಅಪಾಯದಲ್ಲಿವೆ ಎಂದು ಹೇಳಿದ್ದಾರೆ.
ಮೋದಿ ಸರ್ಕಾರವು ರೈತರನ್ನು ಭಿಕ್ಷುಕರಂತೆ ಕಾಣುತ್ತಿದೆ, ಹಾಗೂ ತನ್ನ ಹಿತಾಸಕ್ತಿ ಕಾಪಡಾಲು ಬೇಕಾಗುವಂತೆ ಅಂಕಿ-ಅಂಶಗಳನ್ನು ‘ಆರ್ಡರ್’ ಮಾಡಿ ಸಿದ್ಧಪಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.
ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ‘ರಾಷ್ಟ್ರ ಮಂಚ್’ ಚಳುವಳಿ ನಡೆಸುವುದು, ಎಂದು ಅವರು ಹೇಳಿದ್ದಾರೆ.
ಬಿಜೆಪಿಯಲ್ಲಿ ಪ್ರತಿಯೊಬ್ಬರು ಭಯಭೀತರಾಗಿದ್ದಾರೆ. ದೇಶದಲ್ಲಿ ಚರ್ಚೆ ಹಾಗೂ ಸಂವಾದ ಗಳು ಏಕಮುಖವಾಗಿದೆ; ಪುಂಡರಗುಂಪುಗಳಿಗೆ ನ್ಯಾಯದಾನದ ಕೆಲಸ ನೀಡಿದಂತನಿಸುತ್ತಿದೆ, ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.