
ಬೆಂಗಳೂರು(ಡಿ.07): ಡಿಸೆಂಬರ್ 9 ಕ್ಕೆ ಯಶ್ ಮತ್ತು ರಾಧಿಕಾ ಮದುವೆಯ ಪ್ರಥಮ ವಾರ್ಷಿಕೋತ್ಸವ. ಹೀಗಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಮೊದಲ ಮದುವೆ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ಮೊದಲೇ ಪತ್ನಿ ಹಾಗೂ ತಂದೆ-ತಾಯಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಯಶ್ ಒಂದೇ ಶೋ ರೂಂನಲ್ಲಿ ಬರೋಬ್ಬರಿ ಮೂರು ಮರ್ಸಿಡಿಜ್ ಬೆನ್ಜ್ ಕಾರುಗಳನ್ನು ಕೊಂಡಿದ್ದಾರೆ. ಬೆಂಗಳೂರಿನ ಬೆನ್ಜ್ ಶೋರೂಂನಿಂದ ಮೂರು ಮರ್ಸಿಡಿಜ್ ಕಾರುಗಳನ್ನು ಮನೆಗೆ ಕೊಂಡೊಯ್ದಿದ್ದಾರೆ ರಾಕಿಂಗ್ ಸ್ಟಾರ್.
ಮೂರು ಕೂಡಾ ಟಾಪ್ ಎಂಡ್ ಮಾಡೆಲ್ ಕಾರುಗಳು ಎನ್ನುವುದು ಮತ್ತೊಂದು ವಿಶೇಷ. ಅಂದಹಾಗೆ ಒಂದೇ ಶೋರೂಂನಲ್ಲಿ ಮೂರು ಬೆನ್ಜ್ ಕಾರು ಖರೀದಿಸಿದ ಏಕೈಕ ವ್ಯಕ್ತಿ ಯಶ್ ಎಂದು ಶೋರೂಂನವರು ಯಶ್'ರನ್ನು ಕೊಂಡಾಡಿದ್ದಾರೆ. ಬೆನ್ಜ್ E-Class ಕಾರು ಅಪ್ಪ-ಅಮ್ಮನಿಗೆ, ಬೆನ್ಜ್ GLS ಪತ್ನಿ ರಾಧಿಕಾಗೆ ಮತ್ತು Benz GLC AMG COUPE ಕಾರು ಯಶ್ ಅವರಿಗೆ ಎಂದು ಪರ್ಚೇಸ್ ಮಾಡಲಾಗಿದೆ.
ತಮ್ಮ ವೆಡ್ಡಿಂಗ್ ಆನಿವರ್ಸರಿಗೆ ಇಡೀ ಫ್ಯಾಮಿಲಿಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ ರಾಕಿಂಗ್ ಸ್ಟಾರ್. ಎಲ್ಲಾ ಕಾರುಗಳಿಗೂ ಪೂಜೆ ಮಾಡಿಸಿ ಖುಷಿಯಿಂದ ಮನೆಗೆ ಕೊಂಡೊಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.