1.5 ಲಕ್ಷ ನೀಡಿ ಫ್ಯಾನ್ಸಿ ನಂಬರ್‌ ಖರೀದಿಸಿದ ಯಶ್‌

Published : Jun 20, 2018, 09:02 AM IST
1.5 ಲಕ್ಷ ನೀಡಿ ಫ್ಯಾನ್ಸಿ  ನಂಬರ್‌ ಖರೀದಿಸಿದ ಯಶ್‌

ಸಾರಾಂಶ

ಶಾಂತಿನಗರದ ಟಿಟಿಎಂಸಿ ಕಟ್ಟದಲ್ಲಿರುವ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಕೆಎ 05-ಎಂವೈ ಶ್ರೇಣಿಯ ಫ್ಯಾನ್ಸಿ ನೋಂದಣಿ ಸಂಖ್ಯೆಯ ಹರಾಜಿನಲ್ಲಿ 9999 ನೋಂದಣಿ ಸಂಖ್ಯೆ ಅಧಿಕ ಮೊತ್ತ 4.26 ಲಕ್ಷ ರು.ಗೆ ಹರಾಜಾಯಿತು. 1.47 ಲಕ್ಷ ರು. ನೀಡಿ ಚಿತ್ರನಟ ಯಶ್‌ ಅವರು 8055 ಸಂಖ್ಯೆ ಪಡೆದುಕೊಂಡರು.

ಬೆಂಗಳೂರು (ಜೂ. 20):  ಶಾಂತಿನಗರದ ಟಿಟಿಎಂಸಿ ಕಟ್ಟದಲ್ಲಿರುವ ಸಾರಿಗೆ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ನಡೆದ ಕೆಎ 05-ಎಂವೈ ಶ್ರೇಣಿಯ ಫ್ಯಾನ್ಸಿ ನೋಂದಣಿ ಸಂಖ್ಯೆಯ ಹರಾಜಿನಲ್ಲಿ 9999 ನೋಂದಣಿ ಸಂಖ್ಯೆ ಅಧಿಕ ಮೊತ್ತ 4.26 ಲಕ್ಷ ರು.ಗೆ ಹರಾಜಾಯಿತು. 1.47 ಲಕ್ಷ ರು. ನೀಡಿ ಚಿತ್ರನಟ ಯಶ್‌ ಅವರು 8055 ಸಂಖ್ಯೆ ಪಡೆದುಕೊಂಡರು.

ಒಟ್ಟು 27 ಫ್ಯಾನ್ಸಿ ನಂಬರ್‌ಗಳು ಹರಾಜಾಗಿದ್ದು, ಸಾರಿಗೆ ಇಲಾಖೆಗೆ ಸುಮಾರು 40 ಲಕ್ಷ ರು.ಆದಾಯ ಬಂದಿದೆ. ಈ 27 ಸಂಖ್ಯೆಗಳ ಪೈಕಿ 0001 (2.86 ಲಕ್ಷ ರು.), 9000(2.85 ಲಕ್ಷ ರು.), 6666 (1.85 ಲಕ್ಷ ರು.), 0009 (1.69 ಲಕ್ಷ ರು.), 0003 (1.15 ಲಕ್ಷ ರು.), 0007 (1.11 ಲಕ್ಷ ರು.) ಸಂಖ್ಯೆಗಳನ್ನು ಭಾರಿ ಮೊತ್ತ ನೀಡಿ ಆಸಕ್ತರು ಖರೀದಿಸಿದರು.

ಯಶ್‌ ಕಾರಿಗೆ ಬಾಸ್‌(8055) ಸಂಖ್ಯೆ:

ಹರಾಜಿನಲ್ಲಿ 8055 ನೋಂದಣಿ ಸಂಖ್ಯೆಗೆ ಆರಂಭಿಕ ಠೇವಣಿ 75 ಸಾವಿರ ರು. ಇಡಲಾಗಿತ್ತು. ಅನಂತರ ಆರಂಭಗೊಂಡ ಹರಾಜಿನಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌ ಹೊಸದಾಗಿ ಖರೀದಿಸಿರುವ ಬೆಂಜ್‌ ಕಾರಿಗೆ ಈ ನೋಂದಣಿ ಸಂಖ್ಯೆಯನ್ನು 72 ಸಾವಿರ ರು.ಗೆ ಹರಾಜು ಕೂಗಿದರು. ಹರಾಜಿನಲ್ಲಿ ಸಂಖ್ಯೆಗೆ ಹೆಚ್ಚಿನವರು ಬಿಡ್‌ ಮಾಡದ ಪರಿಣಾಮ ನಟ ಯಶ್‌ ಪರವಾಗಿ ಹರಾಜಿನಲ್ಲಿ ಭಾಗವಹಿಸಿದ ಯಶಪರ ಪಾಲ್ಗೊಂಡಿದ್ದ ರಾಕೇಶ್‌ 72 ಸಾವಿರಕ್ಕೆ ಪಡೆದುಕೊಂಡರು. ಹೀಗಾಗಿ ಹರಾಜು ಮೊತ್ತ 72 ಸಾವಿರ ರು. ಮತ್ತು 75 ಸಾವಿರ ಠೇವಣಿ ಸೇರಿದಂತೆ ಒಟ್ಟಾರೆ 1.47 ಲಕ್ಷ ರು. ನೀಡಿ ಯಶ್‌ ಪರ ಬಿಡ್ಡುದಾರ ರಾಕೇಶ್‌ ಪಡೆದುಕೊಂಡರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರ ಕರ್ನಾಟಕಕ್ಕೆ ಸಿಎಂ ಸಿದ್ದರಾಮಯ್ಯರಿಂದ ₹15,000 ಕೋಟಿ ವಿಶೇಷ ಅನುದಾನ: ಅಜಯ್‌ ಧರಂಸಿಂಗ್
ಕೇಂದ್ರದ ಗಾಂಧೀಜಿ ದ್ವೇಷ ಬಯಲಾಗುತ್ತಿದೆ