ಯಾದವರು, ರಜಪೂತರಿಂದ ಹೆಚ್ಚು ಮದ್ಯ ಸೇವನೆ: ಯುಪಿ ಸಚಿವನ ವಿವಾದ

First Published Apr 29, 2018, 9:47 AM IST
Highlights

ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್‌ ರಾಜ್‌ಬಹಾರ್‌, ರಜತಪೂತರು ಮತ್ತು ಯಾದವರು ಇತರರಿಗಿಂತ ಹೆಚ್ಚು ಮದ್ಯ ಸೇವನೆ ಮಾಡುತ್ತಾರೆ ಎಂಬ ವಿವಾದಿತ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಆಕ್ರೋಶ ಬುಗಿಲೆದ್ದಿದ್ದು, ಪ್ರತಿಭಟನಾಕಾರರು ಸಚಿವರ ಮನೆಗೆ ಟೊಮೆಟೋ ಮತ್ತು ಮೊಟ್ಟೆಗಳನ್ನು ತೂರಿರುವ ಘಟನೆ  ನಡೆದಿದೆ. 

ಲಖನೌ: ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್‌ ರಾಜ್‌ಬಹಾರ್‌, ರಜತಪೂತರು ಮತ್ತು ಯಾದವರು ಇತರರಿಗಿಂತ ಹೆಚ್ಚು ಮದ್ಯ ಸೇವನೆ ಮಾಡುತ್ತಾರೆ ಎಂಬ ವಿವಾದಿತ ಹೇಳಿಕೆ ನೀಡಿದ್ದಾರೆ. 
ಇದರ ಬೆನ್ನಲ್ಲೇ ಆಕ್ರೋಶ ಬುಗಿಲೆದ್ದಿದ್ದು, ಪ್ರತಿಭಟನಾಕಾರರು ಸಚಿವರ ಮನೆಗೆ ಟೊಮೆಟೋ ಮತ್ತು ಮೊಟ್ಟೆಗಳನ್ನು ತೂರಿರುವ ಘಟನೆ  ನಡೆದಿದೆ. ಕೆಂಪು ಟೊಪ್ಪಿ ಧರಿಸಿದ ಜನರು ಓಂ ಪ್ರಕಾಶ್‌ ಅವರ ಅಧಿಕೃತ ಮನೆಯ ಮುಂದೆ ಗುಂಪು ಸೇರಿದ್ದು, ಘೋಷಣೆಗಳನ್ನು ಕೂಗಿ ಮನೆಯ ನಾಮಫಲಕವನ್ನು ಹಾನಿಗೊಳಿಸಿದ್ದಾರೆ. 
ಮದ್ಯಪಾನ ವಿರೋಧಿ ಭಾಷಣ ಮಾಡಿದ ರಾಜ್‌ಬಹಾರ್‌, ರಜಪೂತರು ಮತ್ತು ಯಾದವರು ಹೆಚ್ಚು ಮದ್ಯ ಸೇವನೆ ಮಾಡುತ್ತಾರೆ. ಆದರೆ ರಾಜ್‌ಬಹಾರ್‌ ಸಮುದಾಯವನ್ನು ದೂಷಿಸಲಾಗುತ್ತದೆ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಈ ಕುರಿತು ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಮದ್ಯ ವ್ಯಸನಿಗಳನ್ನು ಜಾತಿಗೆ ಹೋಲಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

click me!