ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಗಂಭೀರ!

By Web DeskFirst Published Aug 12, 2018, 4:48 PM IST
Highlights

ಸಿಪಿಎಂ ನೇತಾರ ಸೋಮನಾಥ್ ಚಟರ್ಜಿ ಗಂಭೀರ! ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ! ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ಚಟರ್ಜಿ
 

ಕೋಲ್ಕತ್ತಾ(ಆ.12): ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ಆರೋಗ್ಯಸ್ಥಿತಿ ಗಂಭೀರವಾಗಿದೆ. ಸಿಪಿಎಂ ಹಿರಿಯ ನಾಯಕರಾಗಿದ್ದ ಚಟರ್ಜಿ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದು, ಶನಿವಾರ ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿದೆ. 

ಆರೋಗ್ಯ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ 89 ವರ್ಷದ ಚಟರ್ಜಿ ಅವರನ್ನು ಕಳೆದ ಶುಕ್ರವಾರವೇ ಕೋಲ್ಕತದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಹತ್ತು ಬಾರಿ ಸಿಪಿಎಂನಿಂದ ಲೋಕಸಭಾ ಸಂಸದರಾಗಿದ್ದ ಚಟರ್ಜಿ, ಪ್ರಸ್ತುತ ಲೋಕಸಭೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. 2004ರಿಂದ 2009ರ ವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 1968ರಲ್ಲಿ ಸಿಪಿಎಂ ಸೇರಿದ್ದ ಅವರು, 2008ರ ವರೆಗೂ ಪಕ್ಷದಲ್ಲಿದ್ದರು. 

ಭಾರತ-ಅಮೆರಿಕ ಪರಮಾಣು ಒಪ್ಪಂದದ ವಿಷಯದಲ್ಲಿ ಯುಪಿಎ ಸರಕಾರಕ್ಕೆ ಸಿಪಿಎಂ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಾಗ, ಸ್ಪೀಕರ್‌ ಹುದ್ದೆ ತ್ಯಜಿಸಲು ಚಟರ್ಜಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ಅವರನ್ನು ಉಚ್ಚಾಟಿಸಿತ್ತು. 

click me!