ಆಶಾ ಕಾರ್ಯಕರ್ತೆಯರ ಮಾನ ಉಳಿಸಿದ ಕಾಂಡೋಮ್!

First Published Jul 16, 2018, 10:03 PM IST
Highlights

ಅಂತಿಮವಾಗಿ ಆಶಾ ಕಾರ್ಯಕರ್ತೆಯರಿಗೆ ಮುಜಗರ ತಪ್ಪಿದೆ. ಸಂಬಳ ಸಾಕಾಗುತ್ತಿಲ್ಲ, ಸರಕಾರದಿಂದ ಸೌಲಭ್ಯ ಸಿಗುತ್ತಿಲ್ಲ ಎಂದೆಲ್ಲ ಪ್ರತಿಭಟನೆ ಮಾಡಿದ್ದನ್ನು ಕೇಳಿದ್ದೇವೆ. ಆದರೆ ಮುಜುಗರ ತಪ್ಪಿಸಲು ಕೋರಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ದರು.

ನವದೆಹಲಿ[ಜು.16]  ಅಂತಿಮವಾಗಿ ಸರಕಾರ ಹೆಸರು ಬದಲಾಯಿಸಿದೆ. ಆಶಾ ಕಾಂಡೋಮ್ ಹೆಸರನ್ನು ಬದಲಾಯಿಸಲಾಗಿದ್ದು ಇನ್ನು ಮೇಲೊ ಕೇವಲ ನಿರೋಧ್ ಎಂದು ಕರೆಯಲಾಗುತ್ತದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಷ್ಟ್ರೀಯ ಆರೋಗ್ಯ ಇಲಾಖೆ ಹೆಚ್ಚುವರಿ ನಿರ್ದೇಶಕಿ ವಂದನಾ ಖಾರೆ , ಇನ್ನು ಮುಂದೆ ಅಂದರೆ ಜುಲೈನಿಂದಲೆ ತಯಾರಾಗುವ ಹೊಸ ನಿರೋಧ್ ಗಳಿಗೆ ಕೇವಲ ನಿರೋಧ್ ಎಂಬ ಹೆಸರು ಮಾತ್ರ ಉಳಿದುಕೊಳ್ಳಲಿದೆ ಎಂದಿದ್ದಾರೆ.

ಈ ನಟಿಯ ಬೆಡ್ ರೂಮ್ ನಲ್ಲಿತ್ತು ಸೆಕ್ಸ್ ಟಾಯ್!

ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ ಆಶಾ ಕಾರ್ಯಕರ್ತೆಯರು ಅಗತ್ಯ ಇರುವವರಿಗೆ ಕಾಂಡೋಮ್ ನೀಡಬೇಕು.  ವಾಸ್ತವವಾಗಿ ಗ್ರಾಮೀಣ ಪ್ರದೇಶದಲ್ಲಿ ಕಾಂಡೋಮ್ ಹಂಚುವ ಕೆಲಸವನ್ನೂ ಆಶಾ ಕಾರ್ಯಕರ್ತೆಯರೇ ಮಾಡಬೇಕು. ಆದರೆ ಕಾಂಡೋಮ್ ಗೂ ಇದೇ ಹೆಸರಿಟ್ಟಿರುವುದರಿಂದ ತೀವ್ರ ಮುಜುಗರಕ್ಕೆ, ಗೇಲಿಗೆ ಗುರಿಯಾಬೇಕಿತ್ತು.

 

click me!