ವಂಡರ್'ಲಾಗೆ 62 ಕೋಟಿ ರೂ. ಆದಾಯ

Published : Nov 17, 2017, 09:25 PM ISTUpdated : Apr 11, 2018, 01:01 PM IST
ವಂಡರ್'ಲಾಗೆ 62 ಕೋಟಿ ರೂ. ಆದಾಯ

ಸಾರಾಂಶ

ಕಳೆದ ವರ್ಷ ಇದೇ ಅವಧಿಯಲ್ಲಿ ಕ್ಯೂ2ನಲ್ಲಿ ಜಿಎಸ್‌ಟಿ ಪರಿಣಾಮವಿದ್ದಾಗಲೂ ಶೇ.11ರಷ್ಟು ಆದಾಯ ಹೆಚ್ಚಳವಾಗಿತ್ತು. ತೀವ್ರ ಪೈಪೋಟಿಯ ನಡುವೆಯೂ ಈ ತ್ರೈಮಾಸಿಕದಲ್ಲಿ ಇಬಿಐ ಟಿಡಿಎ ಲಾಭ ಶೇ.9ರಷ್ಟು ಅಧಿಕಗೊಂಡಿದೆ

ಬೆಂಗಳೂರು(ನ.17): ಭಾರತದ ಪ್ರತಿಷ್ಠಿತ ಮನೋರಂಜನಾ ಪಾರ್ಕ್ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡಂತೆ ಎರಡನೇ ತ್ರೈಮಾಸಿಕದಲ್ಲಿ ಒಟ್ಟು 62 ಕೋಟಿಗಳಷ್ಟು ಆದಾಯ ಗಳಿಸಿದ್ದು, ಶೇ.15 ರಷ್ಟು ಹೆಚ್ಚಳಗೊಂಡಿದೆ.

ಕಳೆದ ವರ್ಷ ಜಿಎಸ್‌ಟಿ ಪರಿಣಾಮ ಆದಾಯ 51.46 ಕೋಟಿಯಷ್ಟಿತ್ತು. 2017-18ರ ಸೆಪ್ಟೆಂಬರ್ ಮಾಸದ ಅಂತ್ಯಕ್ಕೆ ವರ್ಷದ ಮೊದಲಾರ್ಧದಲ್ಲಿನ ಒಟ್ಟು ಆದಾಯ ಗಳಿಕೆ 156.68 ಕೋಟಿಗಳಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕ್ಯೂ2ನಲ್ಲಿ ಜಿಎಸ್‌ಟಿ ಪರಿಣಾಮವಿದ್ದಾಗಲೂ ಶೇ.11ರಷ್ಟು ಆದಾಯ ಹೆಚ್ಚಳವಾಗಿತ್ತು. ತೀವ್ರ ಪೈಪೋಟಿಯ ನಡುವೆಯೂ ಈ ತ್ರೈಮಾಸಿಕದಲ್ಲಿ ಇಬಿಐ ಟಿಡಿಎ ಲಾಭ ಶೇ.9ರಷ್ಟು ಅಧಿಕಗೊಂಡಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿತ್ತಿಲಾಪಿಳ್ಳೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಇಬಿಐಟಿಡಿಎ ಲಾಭ ರೂ.11.81 ಕೋಟಿಯಿಂದ ರೂ. 12.85 ಕೋಟಿಗಳಿಗೆ ಏರಿಕೆ ಕಂಡಿದೆ. ಅಂದರೆ, ಶೇ.9 ರಷ್ಟು ಅಧಿಕಗೊಂಡಿದೆ. ಕಳೆದ ಹಣಕಾಸು ವರ್ಷದಲ್ಲಿ ರೂ. 3.88 ಕೋಟಿಯಷ್ಟಿದ್ದ ಪಿಬಿಟಿಯು 2ನೇ ತ್ರೈಮಾಸಿಕ ದಲ್ಲಿ ರೂ. 3.58 ಕೋಟಿಗೆ ತಲುಪಿದೆ. ಈ ತ್ರೈಮಾಸಿಕಕ್ಕೆ ಪಿಎಟಿ ರೂ.2.33 ಕೋಟಿಗಳಾಗಿದ್ದು, 3.7 ಕೋಟಿ ಕಡಿಮೆಯಾಗಿತ್ತು. ಹೀಗೆ ಇಳಿಕೆಯಾಗುವುದಕ್ಕೆ ಬೆಂಗಳೂರು, ಕೊಚ್ಚಿಗಳಲ್ಲಿ ಹೊಸ ರೈಡ್‌ಗಳು, ಹಳೆಯ ತೆರಿಗೆ ವ್ಯಾಜ್ಯಗಳು, ನಿಬಂಧನೆಗಳು ಕಾರಣವಾಗಿವೆ ಎಂದು ಹೇಳಿದ್ದಾರೆ.

ಕೊಚ್ಚಿಯಲ್ಲಿ ಇತ್ತೀಚೆಗೆ ರೋಲರ್ ಕೋಸ್ಟರ್ ಪ್ರಾರಂಭಿಸಲಾಗಿದೆ. ನಮ್ಮ ಹಳೆಯ ಪಾರ್ಕ್ ಗಳನ್ನು ಪುನಶ್ಛೇತನಗೊಳಿಸಲಾಗುವುದು. ಕಂಪನಿಗೆ ನೂತನ ಪೂರ್ಣಾವಧಿ ನಿರ್ದೇಶಕರಾಗಿ ಜಾರ್ಜ್ ಜೋಸೆಫ್, ಹೆಚ್ಚುವರಿ ನಿರ್ದೇಶಕರಾಗಿ ಹಾಗೂ ನೂತನ ಅಧ್ಯಕ್ಷರನ್ನಾಗಿ ಎಂ. ರಾಮಚಂದ್ರನ್ ಅವರು ನೇಮಕಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಹಿಂದೂ ರಾಷ್ಟ್ರ, ಇದಕ್ಕೆ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ; ಮೋಹನ್ ಭಾಗವತ್
ಕಲಬುರಗಿ: ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ