ಯೋಧನ ಹತ್ಯೆಗೈದವರಿಗೆ ಜೀವಾವಧಿ ಶಿಕ್ಷೆ

By Suvarna Web deskFirst Published Nov 17, 2017, 9:09 PM IST
Highlights

2010ರ ನವೆಂಬರ್ 7ರಂದು ನಡೆದಿದ್ದ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ ಎಸ್. ಸಪ್ಪಣ್ಣವರ್ ಅವರು ಈ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು(ನ.17): ಯೋಧ ನವತಿಂದರ್‌ಸಿಂಗ್ ಅವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ ಸತೀಶ್, ಅಂತೋಣಿ, ಪ್ರದೀಪ್ ಎಂಬ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಪ್ರಧಾನ ಸೆಷನ್ಸ್ ನ್ಯಾಯಾಲಯ ಗುರುವಾರ ಆದೇಶಿಸಿದೆ.

ಜೀವಾವಧಿ ಶಿಕ್ಷೆ ಜೊತೆ ತಲಾ  10,000 ರೂ. ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ಅಪರಾಧಿಗಳು ವಿಫಲರಾದರೆ ಹೆಚ್ಚುವರಿಯಾಗಿ 6 ತಿಂಗಳ ಶಿಕ್ಷೆಯನ್ನು ಅನುಭವಿಸಬೇಕು ಎಂದು ಆದೇಶಿಸಲಾಗಿದೆ. 2010ರ ನವೆಂಬರ್ 7ರಂದು ನಡೆದಿದ್ದ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಬಸವರಾಜ ಎಸ್. ಸಪ್ಪಣ್ಣವರ್ ಅವರು ಈ ಆದೇಶ ಹೊರಡಿಸಿದ್ದಾರೆ.

ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಅಪರಾಧಿಗಳು ಸಾರ್ವಜನಿಕರಿಂದ ಹಣ ಹಾಗೂ ಗಡಿಯಾರ ಕಿತ್ತುಕೊಂಡಿದ್ದರು. ಈ ಸಂಬಂಧ ರೈಲ್ವೆ ಭದ್ರತಾ ಪಡೆಯ(ಆರ್'ಪಿಎಫ್) ಕಾನ್‌ಸ್ಟೇಬಲ್ ಎಸ್.ಎಸ್. ರಾಮಚಂದ್ರಪ್ಪ ಅವರು ಅಪರಾಧಿಗಳನ್ನು ಹಿಡಿದ್ದರು. ಆಗ ರಾಮಚಂದ್ರಪ್ಪ ಅವರಿಗೆ ಅಪರಾಧಿಗಳು ಚಾಕುವಿ ನಿಂದ ಇರಿದ್ದರು. ಅವರ ಸಹಾಯಕ್ಕೆ ಬಂದ ನವತಿಂದರ್‌ಸಿಂಗ್ ಅವರಿಗೂ ಚಾಕುವಿನಿಂದ ಮನಸೋ ಇಚ್ಛೆ ಇರಿದು ಹತ್ಯೆಗೈದು ಪರಾರಿಯಾಗಿದ್ದರು. ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಚನ್ನಪ್ಪ ಜಿ. ಹರಸೂರ ಅವರು ವಾದ ಮಂಡಿಸಿದ್ದರು.

click me!