
ಬಾದಾಮಿ(ಮಾ.22): ಮಗನಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿ ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಮನೆ ಎದುರೇ ವಿಷಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾದಾಮಿ ತಾಲೂಕಿನ ಯರಗೊಪ್ಪ ಎಸ್.ಸಿ ಗ್ರಾಮದ ಶಾಂತವ್ವ ವಾಲಿಕಾರ ಉರ್ಪ ತಳವಾರ(55) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಏನಿದು ಘಟನೆ: ಯರಗೊಪ್ಪ ಗ್ರಾಮದ ಗ್ರಾಮ ಸಹಾಯಕ ಕೆಲಸಕ್ಕೆ ಶಾಂತವ್ವ ಪುತ್ರ ಶಂಕ್ರಪ್ಪ ಅವರನ್ನ ನೇಮಕ ಮಾಡುವಂತೆ ಶಾಸಕರಿಗೆ ಮನವಿ ಮಾಡಿದ್ದರು. ಈ ಮೊದಲು ಶಂಕ್ರವ್ವ ಅವರ ಪತಿ ಗ್ರಾಮ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದರು. ಅವರ ಸಾವಿನ ಬಳಿಕ ಮಗ ಆ ಕೆಲಸ ಮುಂದುವರೆಸಿದ್ದ. ಹೀಗಾಗಿ ಆತನನ್ನೆ ನೇಮಕ ಮಾಡುವಂತೆ ಶಾಸಕರನ್ನು ಶಂಕ್ರವ್ವ ಕೋರಿದ್ದರು. ಆದರೆ, ಶಾಸಕ ಚಿಮ್ಮನಕಟ್ಟಿ ಅವರು ತಮ್ಮ ಸ್ವಜಾತಿಯ ಗೋವಿಂದಪ್ಪ ಅವರನ್ನ ನೇಮಕ ಮಾಡಿಸಿದ್ದರು ಎನ್ನಲಾಗಿದೆ. ಹೀಗಾಗಿ ಮನನೊಂದು ಶಂಕ್ರವ್ವ ಶಾಸಕರ ಮನೆ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದೀಗ ಶಾಸಕರ ವಿರುದ್ದ ಗ್ರಾಮಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.