ಯೋಧರಿಗೆ ರಾಖಿ ಕಟ್ಟಿ, ಆರತಿ ಬೆಳಗಿ ಕಳುಹಿಸಿಕೊಟ್ಟ ಸಂತ್ರಸ್ತರು| ಜೀವ ಕಾಪಾಡಿದ ಯೋಧರಿಗೆ ಸಾಂಗ್ಲಿ ಮಹಿಳೆಯರ ಕೃತಜ್ಞತೆ
ಸಾಂಗ್ಲಿ[ಆ.13]: ಕಳೆದೊಂದು ವಾರದಿಂದ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಯ ಲಕ್ಷಾಂತರ ಜನ ಅಪಾಯದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇಂಥ ವೇಳೆ ಎನ್‌ಡಿಆರ್‌ಎಫ್ ಮತ್ತು ಭಾರತೀಯ ಸೇನೆ ಸಕಾಲದಲ್ಲಿ ಆಗಮಿಸಿ ಲಕ್ಷಾಂತರ ಜನರನ್ನು ಅಪಾಯದಿಂದ ಪಾರು ಮಾಡಿತ್ತು.ರಕ್ಷಣಾ ಕಾರ್ಯ ಪೂರ್ಣಗೊಂಡ ಬಳಿಕ ಯೋಧರು ಸೋಮವಾರ ತಮ್ಮ ಸ್ವಸ್ಥಾನಗಳಿಗೆ ಮರಳಲು ಆರಂಭಿಸಿದ್ದಾರೆ.
ऐसा देश है मेरा.. ❤
After helping the flood affected area our teams and security forces were leaving the area..... this is how the ladies of Sangli (Maharashtra) greeted them on their way back....tears pic.twitter.com/e3e2hOTE7A
ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ
ಈ ವೇಳೆ ತಮ್ಮನ್ನು ಪ್ರಾಣಾಪಾಯದಿಂದ ಕಾಪಾಡಿದ್ದ ಯೋಧರಿಗೆ ರಾಖಿ ಕಟ್ಟಿಸೋದರಿಯರ ಪ್ರೀತಿ ತೋರಿದ ಸಾಂಗ್ಲಿಯ ಮಹಿಳೆಯರು, ಯೋಧರಿಗೆ ಆರತಿ ಬೆಳಗಿ ಶುಭ ಹಾರೈಸಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ತಮ್ಮ ಜೀವ ಕಾಪಾಡಿದ ಯೋಧರಿಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ.