ಲೈಂಗಿಕ ಕಿರುಕುಳ: ಟ್ರಂಪ್ ವಿರುದ್ಧ ತನಿಖೆಗೆ ಸಂಸದೆಯರ ಆಗ್ರಹ

By Suvarna Web DeskFirst Published Dec 13, 2017, 12:35 PM IST
Highlights

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು 50ಕ್ಕೂ ಹೆಚ್ಚು ಡೆಮಾಕ್ರಟಿಕ್ ಮಹಿಳಾ ಸಂಸದರು ಒತ್ತಾಯಿಸಿದ್ದಾರೆ.

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು 50ಕ್ಕೂ ಹೆಚ್ಚು ಡೆಮಾಕ್ರಟಿಕ್ ಮಹಿಳಾ ಸಂಸದರು ಒತ್ತಾಯಿಸಿದ್ದಾರೆ.

ಆರೋಪಗಳ ಕುರಿತ ತನಿಖೆ ಈಗಾಗಲೇ ವಿಳಂಬವಾಗಿದೆ. ಮೇಲ್ವಿಚಾರಣೆ ಮತ್ತು ಸರ್ಕಾರಿ ಸುಧಾರಣೆಗಳ ಸಮಿತಿಯ ಸದಸ್ಯರು ಮತ್ತು ಅಧ್ಯಕ್ಷರಿಗೆ ಈ ಸಂಬಂಧ 54 ಸಂಸದೆಯರು ಸಹಿ ಮಾಡಿದ ಪತ್ರ ರವಾನಿಸಲಾಗಿದೆ.

ಅಮೆರಿಕದಾದ್ಯಂತ ಮಹಿಳೆಯರು ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳಗಳ ಕುರಿತು ಬಹಿರಂಗವಾಗಿ ಹೇಳಿಕೊಳ್ಳುತ್ತಿರುವ ‘ಮೀ ಟೂ’ ಚಳವಳಿ ಕುರಿತಂತೆ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

click me!