
ಸ್ಪೇನ್(ಅ.17): ಒಮ್ಮೊಮ್ಮೆ ಟಿವಿ ಕಾರ್ಯಕ್ರಮಗಳ ಅತಿರೇಕ ಯಾವ ರೀತಿ ಇರುತ್ತದೆ ಎಂಬುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿ. ಅದರಲ್ಲೂ ವಿದೇಶಿ ಮಾಧ್ಯಮಗಳಲ್ಲಿ ಅತಿರೇಕದ ವರ್ತನೆ ಹೆಚ್ಚು. ಹಿಂದೊಮ್ಮೆ ಬ್ರಾ ಲೆಸ್ ಆಂಕರ್ ಕೂರಿಸಿದ್ದ ಸುದ್ದಿಯನ್ನೂ ಕೇಳಿದ್ದೇವೆ. ಇದೀಗ, ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯೊಬ್ಬರ ಟಾಪ್ ಅನ್ನ ಕೆಳಕ್ಕೆ ಎಳೆದು ಟಿವಿ ಆಂಕರ್ ಅಸಭ್ಯವಾಗಿ ವರ್ತಿಸಿದ ಘಟನೆ ಸ್ಪೇನ್`ನಲ್ಲಿ ನಡೆದಿದೆ.
ಸ್ಪೇನ್`ನಲ್ಲಿ ಅತ್ಯಂತ ದೊಡ್ಡ ಸ್ತನಗಳನ್ನ ಹೊಂದಿದ್ದಾಳೆ ಎನ್ನಲಾದ ಯೋಲಾ ಬೆರ್ರೋಕಾಲ್ ಎಂಬ ಮಹಿಳೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಪ್ಯಾನಲ್`ನಲ್ಲಿದ್ದ ಯೋಲಾಳನ್ನ ತೋರಿಸಿ ವೀಕ್ಷಕರಿಗೆ ವಿವರಿಸುತ್ತಿದ್ದ ಟಿವಿ ಪ್ರೆಸೆಂಟರ್ ಏಕಾಏಕಿ ಆಕೆ ಟಾಪ್ ಅನ್ನ ಹಿಡಿದು ಕೆಳಗೆಳೆದಿದ್ದಾನೆ. ಈ ಸಂದರ್ಭ ಕುಪಿತಗೊಂಡ ಯೋಲಾ ಪ್ಯಾನಲ್`ನಿಂದ ಹೊರಗೆ ಹೋಗಿದ್ದಾರೆ.
ಆನ್`ಲೈನ್`ನಲ್ಲಿ ಈ ವಿಡಿಯೋ 23 ಲಕ್ಷಕ್ಕೂ ಅಧಿಕ ಬಾರಿ ನೋಡಲಾಗಿತ್ತು. ಭಾರೀ ಟೀಕೆ ಕೇಳಿಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.