ಗಂಡನಿಂದ ಪಾರಾಗಲು ಸ್ಪೆಷಲ್ ನಾಯಿಗಳನ್ನು ಖರೀದಿಸುತ್ತಿದ್ದಾರೆ ಸ್ಪೇನ್'ನ ಮಹಿಳೆಯರು!

By Web DeskFirst Published Oct 23, 2016, 7:19 AM IST
Highlights

ಮನೆಯಲ್ಲಿ ಅನುಭವಿಸುವ ದೈಹಿಕ ಹಿಂಸೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಪೇನ್'ನ ಮಹಿಳೆಯರು ಸೆಕ್ಯೂರಿಟಿ ಏಜೆನ್ಸಿಗಳಿಂದ ನಾಯಿಗಳನ್ನು ಸಾಕುತ್ತಿದ್ದಾರಂತೆ. ಸೆಕ್ಯೂರಿಟಿ ಏಜೆನ್ಸಿಯ ಈ ನಾಯಿಗಳಿಗೆ ಪತಿಯೊಬ್ಬ ಅರಚಾಡಿದರೆ ಇಲ್ಲವೇ ಮಹಿಳೆಯ ಮೇಲೆ ಕೈ ಎತ್ತಿದ ಸಂದರ್ಭದಲ್ಲಿ, ಆತನ ಮೇಲೆ ಆಕ್ರಮಣ ಮಾಡುವ ಇಲ್ಲವೇ ಬೊಗಳುವ ತರಬೇತಿ ನೀಡಲಾಗುತ್ತದೆ. ಇದಾದ ಬಳಿಕ ಈ ನಾಯಿ ಯಾವ ಮಹಿಳೆಗೆ ನೀಡಲಾಗುತ್ತದೋ ಆಕೆಯ ಪರಿಚಯವಾಗುವ ನಿಟ್ಟಿನಲ್ಲಿ, ಮತ್ತೆ ಆಕೆಯೊಂದಿಗೆ 200 ಗಂಟೆಗಳ ತರಬೇತಿ ನೀಡುತ್ತಾರೆ.  

ಸ್ಪೇನ್(ಅ.23): ಮನೆಯಲ್ಲಿ ಅನುಭವಿಸುವ ದೈಹಿಕ ಹಿಂಸೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ಪೇನ್'ನ ಮಹಿಳೆಯರು ಸೆಕ್ಯೂರಿಟಿ ಏಜೆನ್ಸಿಗಳಿಂದ ನಾಯಿಗಳನ್ನು ಸಾಕುತ್ತಿದ್ದಾರಂತೆ. ಈ ನಾಯಿಗಳಲ್ಲಿ ಅಂತಹ ವಿಶೇಷವೇನಿದೆ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ

ಸೆಕ್ಯೂರಿಟಿ ಏಜೆನ್ಸಿಯ ಈ ನಾಯಿಗಳಿಗೆ ಪತಿಯೊಬ್ಬ ಅರಚಾಡಿದರೆ ಇಲ್ಲವೇ ಮಹಿಳೆಯ ಮೇಲೆ ಕೈ ಎತ್ತಿದ ಸಂದರ್ಭದಲ್ಲಿ, ಆತನ ಮೇಲೆ ಆಕ್ರಮಣ ಮಾಡುವ ಇಲ್ಲವೇ ಬೊಗಳುವ ತರಬೇತಿ ನೀಡಲಾಗುತ್ತದೆ. ಇದಾದ ಬಳಿಕ ಈ ನಾಯಿ ಯಾವ ಮಹಿಳೆಗೆ ನೀಡಲಾಗುತ್ತದೋ ಆಕೆಯ ಪರಿಚಯವಾಗುವ ನಿಟ್ಟಿನಲ್ಲಿ, ಮತ್ತೆ ಆಕೆಯೊಂದಿಗೆ 200 ಗಂಟೆಗಳ ತರಬೇತಿ ನೀಡುತ್ತಾರೆ.  

ಹೀಗೆ ಯಾಕಾಗುತ್ತದೆ?

ಯುಎನ್ ನೀಡಿರುವ ವರದಿಯನ್ವಯ ಕಳೆದ ಕೆಲ ವರ್ಷಗಳಿಂದ ಸ್ಪೇನ್'ನಲ್ಲಿ ಮಹಿಳೆಯರ ಮೇಲೆ ಮನೆಯಲ್ಲಿ ನಡೆಯುತ್ತಿರುವ ಹಿಂಸಾಚಾರ ಹೆಚ್ಚಾಗಿದೆ. ಕಳೆದ ವರ್ಷ ಸ್ಪೇನ್'ನ ಶೇಕಡಾ 13ರಷ್ಟು ಮಹಿಳೆಯರು ತಮ್ಮ ಪತಿ ನೀಡುವ ಮಾನಸಿಕ ಹಾಗೂ ದೈಹಿಕ ಕಿರುಕುಳದಿಂದ ನಲುಗಿದ್ದಾರೆ. ವಿಚ್ಛೇದನ ಪಡೆದ ಬಳಿಕವೂ ಮಾಜಿ ಪತಿ ಮನೆಗೆ ಬಂದು ಹಿಂಸೆ ಕೊಡುತ್ತಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಪೊಲೀಸರಿಗೆ ತುಂಬಾ ಕಷ್ಟವಾಗುತ್ತದೆ. ಹೀಗಾಗಿ ಇಲ್ಲಿನ ಮಹಿಳೆಯರು ವಿಶೇಷ ತಳಿಯ ಈ ನಾಯಿಗಳನ್ನು ಖರೀದಿಸುತ್ತಿದ್ದಾರೆ.

ಪರಿಣಾಮವೇನು?

ಮಹಿಳೆಯರ ಪ್ರತಿಕ್ರಿಯೆಯನ್ವಯ ಇದರಿಂದ ಅವರಿಕೆ ಬಹಳ ಅನುಕೂಲವಾಗಿದೆ ಎಂದು ತಿಳಿದು ಬಂದಿದೆ. ಮಹಿಳೆಯೊಬ್ಬಳು ಹಿಂಸಾಚಾರದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಕುರಿತಾಗಿ ಹಮ್ಮಕೊಳ್ಳುವ ಬಹಳಷ್ಟು ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿದ್ದಳು ಆದರೆ ಅದರಿಂದೇನು ಉಪಯೋಗವಾಗಿರಲಿಲ್ಲವಂತೆ. ಬಳಿಕ ಆಕೆ ಈ ಸ್ಪೆಷಲ್ ನಾಯಿಯನ್ನು ಖರೀದಿಸಿದ್ದು, ಈ ನಾಯಿ ಯಾವತ್ತೂ ಆಕೆಯೊಂದಿಗಿರುತ್ತಿತ್ತು. ಹೀಗಾಗಿ ಆಕೆಯ ಗಂಡ ನಾಯಿ ಬಂದ ಬಳಿಕ ಜಗಳವೂ ಆಡಿಲ್ಲವಂತೆ.

ಈ ಐಡಿಯಾ ಬಂದದ್ದು ಹೇಗೆ ಗೊತ್ತಾ?

ಮಹಿಳೆಯರಿಗೆ ನಾಯಿಗಳನ್ನು ರವಾನಿಸುವ ಸೆಕ್ಯೂರಿಟಿ ಏಜೆನ್ಸಿಯ ಸಂಚಾಲಕಿ ಏಂಜಲ್ ಮಾರಿಸ್ಕಲ್ ಸುಮಾರು 25 ವರ್ಷಗಳಿಂದ ಈ ವಿಶೇಷ ತಳಿಯ ನಾಯಿಗಳನ್ನು ಪೋಷಿಸುತ್ತಿದ್ದಾಳೆ. ಈಕೆಯ ಬಳಿ ಈ ಕುರಿತಾಗಿ ಕೇಳಿದಾಗ 'ಕೆಲ ವರ್ಷಗಳ ಹಿಂದೆ ತನ್ನ ಪತಿ ತನ್ನನ್ನು ಹಿಂಸಿಸುತ್ತಾನೆ ಎಂದು ಮಹಿಳೆಯೊಬ್ಬಳು ನನಗೆ ಕರೆ ಮಾಡಿ ತನ್ನ ನೋವನ್ನು ತೋಡಿಕೊಂಡಿದ್ದಳು. ಆ ಸಂದರ್ಭದಲ್ಲಿ ಮಹಿಳೆಯನ್ನು ಆಕೆಯ ಪತಿ ನೀಡುವ ಹಿಂಸಾಚಾರದಿಂದ ರಕ್ಷಿಸುವಂತೆ ನಾಯಿಗಳಿಗೆ ತರಬೇತಿ ನೀಡಬೇಕು ಎಂಬ ಐಡಿಯಾ ನನಗೆ ಹೊಳೆದಿತ್ತು. ಇದರ ಟನ್ವಯ ನಾಯಿಗಳಿಗೆ ತರಬೇತಿ ನೀಡಲು ಆರಂಭಿಸಿದೆ. ಈವರೆಗೂ 20 ಮಹಿಳೆಯರಿಗೆ ಸ್ಪೆಷಲ್ ನಾಯಿಗಳನ್ನು ಕೊಟ್ಟಿದ್ದು, ಇನ್ನೂ 16 ಮಹಿಳೆಯರು ನಾಯಿಗಳನ್ನು ಆರ್ಡರ್ ಮಾಡಿದ್ದಾರೆ' ಎಂದಿದ್ದಾರೆ.

ಕೃಪೆ: ND TV

click me!