
ಲಖನೌ(ಜೂ.28): ಭಾರತೀಯ ಸೇನೆಯ ಯೋಧರು ಅತ್ಯಾಚಾರಿಗಳು ಎಂಬ ಗಂಭೀರ ಆರೋಪ ಮಾಡುವ ಮೂಲಕ ಸಮಾಜವಾದಿ ಪಕ್ಷದ ಮುಖಂಡ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ
ತಮ್ಮ ಸ್ವಕ್ಷೇತ್ರ ರಾಂಪುರದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಆಜಂ ಖಾನ್, ‘ಯೋಧರ ತಲೆ, ಕೈ, ಕಾಲು ಕತ್ತರಿಸುವುದು ಸಾಮಾನ್ಯ. ಆದರೆ ಇತ್ತೀಚೆಗೆ ಮಹಿಳೆಯರು ಯೋಧರ ಜನನಾಂಗವನ್ನು ಕತ್ತರಿಸುತ್ತಿದ್ದಾರೆ. ಅವರಿಗೆ ಯಾವುದರಿಂದ ತೊಂದರೆ ಆಗುತ್ತಿದೆಯೋ ಅದನ್ನು ಮಹಿಳೆಯರು ಕತ್ತರಿಸುತ್ತಿದ್ದಾರೆ’ ಎಂದು ಆರೋಪಿಸುವ ಮೂಲಕ ಯೋಧರು ಅತ್ಯಾಚಾರಿಗಳು ಎಂದು ದೂಷಿಸಿದ್ದಾರೆ.
ಅಜಂಖಾನ್ ಹೇಳಿಕೆಗೆ ಬಿಜಿಪಿ ಸೇರಿದಂತೆ ವಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಒಂದು ಕಡೆ ಸೈನಿಕರು ಹಗಲು ರಾತ್ರಿ ದೇಶದ ಗಡಿಯನ್ನು ಕಾಯುತ್ತಿದ್ದರೆ, ಕೆಲವೊಂದು ರಾಜಕೀಯ ಪಕ್ಷಗಳು ಅವರ ಮೇಲೆ ಹರಿಹಾಯುತ್ತಿದ್ದಾರೆ ಎಂದು ಬಿಜಿಪಿ ನಾಯಕ ಸಮಿತ್ ಪಾತ್ರ ಕಿಡಿಕಾರಿದ್ದಾರೆ.
ಬಲಾಢ್ಯವಾದ ಪ್ರಜಾಪ್ರಭುತ್ವದಡಿಯಲ್ಲಿ ಕೆಲಸ ಮಾಡುವ ಭಾರತೀಯ ಸೇನೆಯನ್ನು ವಿಶ್ವದಾದ್ಯಂತ ಗೌರವಿಸಲಾಗುತ್ತದೆ ಎಂದು ಪಾತ್ರ ಹೇಳಿದ್ದಾರೆ.
ಈ ಹಿಂದೆ ಅಜಂಖಾನ್ ಮಹಿಳೆಯರು ಮೊಬೈಲ್ ಫೋನ್ ಬಳಸುವುದರಿಂದಲೇ ಅವರ ಮೇಲೆ ಅತ್ಯಾಚಾರಗಳು ನಡೆಯುತ್ತವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.