
ತುಮಕೂರು (ಜೂ. 27): ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಡಿಸಿಎಂ ಜಿ.ಪರಮೇಶ್ವರ್ ತಾವೇ ದೇವಮಾನವರಾಗಿದ್ದಾರೆ.
ದೇವರಿಗೆ ಕೈ ಮುಗಿಯುವುದನ್ನು ಬಿಟ್ಟು ಮಹಿಳಾಮಣಿಗಳು ಪರಮೇಶ್ವರ್ ರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಒಬ್ಬರಾದ ಮೇಲೆ ಒಬ್ಬರು ಕಾಲಿಗೆ ಬೀಳುತಿದ್ದರೂ ಪರಮೇಶ್ವರ್ ನಿರಾಕರಿಸಲಿಲ್ಲ. ಮಹಿಳಾ ಕಾರ್ಯಕರ್ತರು, ಸಾರ್ವಜನಿಕರಿಂದ ಜಿ.ಪರಮೇಶ್ವರ್ ಪಾದಕ್ಕೆರಗಿ ನಮಸ್ಕರಿಸಿದ್ದಾರೆ. ಸೀಬಿ ಗ್ರಾಮದ ನರಸಿಹಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.
ತಮ್ಮ ಹರಕೆ ತೀರಿಸಲು ಬಂದಿದ್ದ ಜಿ.ಪರಮೇಶ್ವರ್ ನೋಡಿ ಭಾವುಕರಾದ ಜನ ಕಾಲಿಗೆ ಬಿದ್ದಿದ್ದಾರೆ. ಸಮಾಜವಾದಿ, ಪ್ರಗತಿಪರರು ಈ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.