ಏರ್ ಇಂಡಿಯಾ ಸಿಬ್ಬಂದಿಗೆ ಬೈದಿದ್ದ ಐರಿಷ್ ಮಹಿಳೆ ಆತ್ಮಹತ್ಯೆ!

Published : Jul 04, 2019, 03:36 PM IST
ಏರ್ ಇಂಡಿಯಾ ಸಿಬ್ಬಂದಿಗೆ ಬೈದಿದ್ದ ಐರಿಷ್ ಮಹಿಳೆ ಆತ್ಮಹತ್ಯೆ!

ಸಾರಾಂಶ

ಏರ್ ಇಂಡಿಯಾ ಸಿಬ್ಬಂದಿಗೆ ಬೈದಿದ್ದ ಐರಿಷ್ ಮಹಿಳೆ ಆತ್ಮಹತ್ಯೆ| ವೈನ್ ಕೊಡದ ಸಿಬ್ಬಂದಿ ವಿರುದ್ಧ ಜನಾಂಗೀಯ ನಿಂದನೆ| ಸಿಬ್ಬಂದಿ ಮುಖಕ್ಕೆ ಉಗಿದು ರಂಪಾಟ ಮಾಡಿದ್ದ ಸಿಮೋನ್ ಬರ್ನ್ಸ್| ಸಿಮೋನ್ ಬರ್ನ್ಸ್‌ಗೆ 6 ತಿಂಗಳು ಜೈಲುಶಿಕ್ಷೆ ವಿಧಿಸಿದ್ದ ಸ್ಥಳೀಯ ನ್ಯಾಯಾಲಯ| ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಸಿಮೋನ್|

ನವದೆಹಲಿ(ಜು.04): ಏರ್‌ ಇಂಡಿಯಾ ಸಿಬ್ಬಂದಿ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದ ಐರಿಷ್ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂಬೈನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಸಿಬ್ಬಂದಿಗೆ ಈ ಮಹಿಳೆ ಜನಾಂಗೀಯ ನಿಂದನೆ ಮಾಡಿದ್ದಳು ಎನ್ನಲಾಗಿದೆ.

ಹೆಚ್ಚಿನ ವೈನ್ ನೀಡದ ಕಾರಣ ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದ ಸಿಮೋನ್ ಬರ್ನ್ಸ್, ಸಿಬ್ಬಂದಿ ವಿರುದ್ಧ ಕೀಳು ಪದ ಬಳಸಿದ್ದಲ್ಲದೇ ಮುಖಕ್ಕೆ ಉಗಿದಿದ್ದಳು.

ಈ ಕುರಿತು ಸಿಮೋನ್'ಗೆ ಸ್ಥಳೀಯ ನ್ಯಾಯಾಲಯ 6 ತಿಂಗಳ ಜೈಲುಶಿಕ್ಷೆ ಮತ್ತು 300 ಪೌಂಡ್ ದಂಡ ವಿಧಿಸಿತ್ತು. ಕಳೆದ ಎರಡು ವಾರಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಸಿಮೋನ್, ಇಂಗ್ಲೆಂಡ್‌ನ ಈಸ್ಟ್ ಸಸೆಕ್ಸ್'ನಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಲಂಡನ್‌ಗೆ ಪ್ರಯಾಣಿಸಿದ್ದ ಸಿಮೋನ್ ಬರ್ನ್ಸ್, ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ವೈನ್ ಸೇವಿಸಿದ್ದಲ್ಲದೇ ಹೆಚ್ಚಿನ ವೈನ್‌ಗಾಘಿ ಬೇಡಿಕೆ ಇಟ್ಟಿದ್ದಳು. ಆದರೆ ವೈನ್ ಕೊಡಲು ನಿರಾಕರಿಸಿದ ಏರ್ ಇಂಡಿಯಾ ಸಿಬ್ಬಂದಿ ವಿರುದ್ಧ ಜನಾಂಗೀಯ ನಿಂದನೆ ಪದ ಬಳಸಿದ್ದಳು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Food Adulteration: ಹೋಳಿ ಹಬ್ಬದ ಹೊತ್ತಲ್ಲೇ ಆಹಾರ ಕಲಬೆರಕೆ ವಿರುದ್ಧ ದೆಹಲಿಯಲ್ಲಿ ಬಿಗ್ ಆಪರೇಷನ್!
ಭಾರತ ಸೇರಿದಂತೆ ವಿಶ್ವದ 40 ದೇಶಗಳಿಂದ ಚಿಕನ್‌, ಮೊಟ್ಟೆ ಆಮದು ಬ್ಯಾನ್‌ ಮಾಡಿದ ಮುಸ್ಲಿಂ ದೇಶ!