
ಬರೇಲಿ (ಜ.2): ಉತ್ತರ ಪ್ರದೇಶದಲ್ಲಿ ಮನಕಲುಕುವ ಶಾಕಿಂಗ್ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಬರೇಲಿ ಜಿಲ್ಲೆಯ ಮೀರ್ ಗಂಜ್ ಪ್ರದೇಶದಲ್ಲಿ ತನ್ನ ಗಂಡನ ಚಿಕಿತ್ಸೆಗಾಗಿ ಮಹಿಳೆಯೋರ್ವಳು ತನ್ನ 15 ದಿನದ ಹಸುಗೂಸನ್ನೇ 45 ಸಾವಿರ ರೂ.ಗೆ ಮಾರಾಟ ಮಾಡಿದ್ದಾಳೆ.
ಈ ಮಾತನಾಡಿರುವ ಆಕೆ ತನ್ನ ಪತಿಗೆ ಅನಾರೋಗ್ಯ ಕಾಡುತ್ತಿದ್ದು, ಚಿಕಿತ್ಸೆ ಕೊಡಿಸಲು ಹಣವಿಲ್ಲದ ಕಾರಣ ಮಗುವನ್ನು ಮಾರಾಟ ಮಾಡಿದ್ದಾಗಿ ಹೇಳಿದ್ದಾರೆ.
ಬಡತನ ಹಿನ್ನೆಲೆ ಇರುವ ಕೆಲ ಕುಟುಂಬಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಬೆಳಕಿಗೆ ಬಾರದೆ ಉಳಿಯುತ್ತಿದೆ. 2017ರ ಮೇ ತಿಂಗಳಲ್ಲಿಯೂ ಕೂಡ ತ್ರಿಪುರಾದಲ್ಲಿ ಕೇವಲ 200 ರು.ಗೆ ಮಗುವನ್ನು ಮಾರಾಟ ಮಾಡಿದ ಘಟನೆಯೊಂದು ಬೆಳಕಿಗೆ ಬಂದಿತ್ತು.
ಅದಾದ ಬಳಿಕ ಸೋಸಿಯಲ್ ವೆಲ್ಫೇರ್ ಹಾಗೂ ಸೋಸಿಯಲ್ ಎಜುಕೇಶನ್ ಇಲಾಖೆ ಮಗುವನ್ನು ವಾಪಸ್ ಕುಟುಂಬಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.