
ನವದೆಹಲಿ (ಜ.05): ಹಳೆಯ ನೋಟುಗಳನ್ನು ವಿನಿಮಯ ಮಾಡಲು ಸತತವಾಗಿ ಪ್ರಯತ್ನಿಸಿದ ಬಳಿಕವೂ ಸಾಧ್ಯವಾಗದಿದ್ದಾಗ ಬಡ ಮಹಿಳೆಯೊಬ್ಬಳು ವಿವಸ್ತ್ರಳಾಗಿ ಪ್ರತಿಭಟಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಡಿ.30ರ ಬಳಿಕವೂ ರಿಸರ್ವ್ ಬ್ಯಾಂಕಿನಲ್ಲಿ ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿರುವ ಹಿನ್ನಲೆಯಲ್ಲಿ ಮಗುವನ್ನು ಹೊಂದಿದ್ದ ಮಹಿಳೆಯೊಬ್ಬಳು ರಿಸರ್ವ್ ಬ್ಯಾಂಕಿಗೆ ಭೇಟಿ ನೀಡಿದರೂ, ಹೊಸ ನೋಟು ಪಡೆಯಲು ಸಾಧ್ಯವಾಗಲಿಲ್ಲವೆನ್ನಲಾಗಿದೆ.
ಹತಾಶಳಾದ ಮಹಿಳೆ ಕೊನೆಗೆ ಪ್ರತಿಭಟನೆಯ ರೂಪದಲ್ಲಿ ತನ್ನ ಮೇಲ್ವಸ್ತ್ರವನ್ನು ಕಳಚಿ ರಿಸರ್ವ್ ಬ್ಯಾಂಕ್ ಗೇಟಿನ ಮುಂದೆ ಕುಳಿತುಕೊಂಡಳು ಎನ್ನಲಾಗಿದೆ.
ಮಹಿಳೆಯ ಅನಿರೀಕ್ಷಿತವಾದ ಪ್ರತಿಭಟನೆಯಿಂದ ತಬ್ಬಿಬ್ಬಾದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಕರೆದ ಬಳಿಕ ಆಕೆಯನ್ನು ಠಾಣೆಗೆ ಕರೆದೊಯ್ಯಲಾಯಿತು.
ಹಳೆಯ ನೋಟುಗಳನ್ನು ರಿಸರ್ವ್ ಬ್ಯಾಂಕಿನಲ್ಲಿ ಮಾ.31ರವರೆಗೆ ವಿನಿಮಯ ಮಾಡಿಕೊಳ್ಳಲು ಅವಕಾಶವಿರುವುದೆಂದು ಪ್ರಧಾನಿ ಮೋದಿ ನ.8ರ ಭಾಷಣದಲ್ಲಿ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.