
ಲಕ್ನೋ[ಜು.17] ಮುಸ್ಲಿಂ ಮಹಿಳೆಯೊಬ್ಬರು ತಮ್ಮ ಅಂತರಾಳದಲ್ಲಿ ಹುದುಗಿದ್ದ ನೋವನ್ನು ಹೊರಹಾಕಿದ್ದಾರೆ. ಅನೇಕ ಪುರುಷರೊಂದಿಗೆ ಮಲಗುವಂತೆ ಆಕೆಗೆ ನಿರಂತರ ಒತ್ತಡ ಹಾಕಲಾಗುತ್ತಿತ್ತು. ತಲಾಖ್ ಹೆಸರಿನಲ್ಲಿ ನಾಲ್ಕಾರು ಸಾರಿ ವಿಚ್ಛೇದನ ನೀಡಲಾಗಿತ್ತು ಎಂಬ ಆತಂಕಕಾರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.
ಬೈರೇಲಿಯ ನಿವಾಸಿ ಸಬೀನಾ ತಾನು ಅನುಭವಿಸಿದ ನೋವನ್ನು ಬಹಿರಂಗವಾಗಿ ಹೇಳುವ ಧೈರ್ಯ ಮಾಡಿದ್ದಾರೆ. ನನಗಾದ ನೋವನ್ನು ಹೇಳಿಕೊಳ್ಳುವುದಕ್ಕೆ ಭಯವಾಗುತ್ತಿದೆ. ನನ್ನ ಪ್ರಾಣಕ್ಕೂ ಸಂಚಕಾರ ಬರುವ ಅಪಾಯವಿದೆ ಎಂದು ಹೇಳಿದ್ದಾರೆ.
ಮೊದಲು ಮದುವೆಯಾದ ಗಂಡ ಆಕೆಗೆ ತಲಾಖ್ ನೀಡಿದ್ದ. ಇದಾದ ಮೇಲೆ ತಲಾಖ್ ನೀಡಿದ ವ್ಯಕ್ತಿಯ ತಂದೆಯೊಂದಿಗೆ ಮದುವೆಯಾಗುವಂತೆ ಒತ್ತಡ ಹೇರಲಾಯಿತು. ಬಲವಂತವಾಗಿ ಮದುವೆಯನ್ನು ಮಾಡಿಕೊಡಲಾಯತು. ಮತ್ತೆ ತಲಾಖ್ ನೀಡಲಾಯಿತು. ಪುನಃ ಹಳೆ ಗಂಡನಿಗೆ ಮದುವೆ ಮಾಡಲಾಯಿತು. ಮತ್ತೆ ವಿಚ್ಛೇದನ ಗಂಡನ ತಮ್ಮನೊಂದಿಗೆ ಮದುವೆ... ಹೀಗೆ ಮಹಿಳೆ ನಿರಂತರ ದೌರ್ಜ್ಯದಿಂದ ಬೇಸತ್ತು ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.