ಗರ್ಭಿಣಿಯನ್ನು 12 ಕಿ.ಮೀ ಹೊತ್ತು ನಡೆದರು: ರಸ್ತೆಯಲ್ಲೇ ಮಗು ಸಾವು!

By Web DeskFirst Published Jul 31, 2018, 5:55 PM IST
Highlights

ಸರಿಯಾದ ಸಮಯಕ್ಕೆ ಬಾರದ ಆ್ಯಂಬುಲೆನ್ಸ್

ಗರ್ಭಿಣಿಯನ್ನು ಹೊತ್ತು ನಡೆದ ಗ್ರಾಮಸ್ಥರು

ರಸ್ತೆ ಮಾರ್ಗ ಇಲ್ಲದೇ ಪೇಚಾಡಿದ ಗರ್ಭಿಣಿ

ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಚಿಕಿತ್ಸೆ ಸಿಗದೇ ರಸ್ತೆಯಲ್ಲೇ ಮೃತಪಟ್ಟ ಮಗು 

ಹೈದರಾಬಾದ್(ಜು.31): ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಬರದ ಕಾರಣ ಗರ್ಭಿಣಿಯೋರ್ವಳು, ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ದುರದೃಷ್ಟವಶಾತ ಮಗು ಮೃತಪಟ್ಟಿದ್ದು, ಗ್ರಾಮಸ್ಥರು ರಸ್ತೆ ಮಾರ್ಗ ಸರಿ ಇಲ್ಲದಿರುವುದೇ ಕಾರಣ ಎಂದು ದೂರಿದ್ದಾರೆ.

ಜಿನದಮ್ಮ ಎಂಬ ಮಹಿಳೆಗೆ ಪ್ರಸವ ವೇದನೆ ಪ್ರಾರಂಭವಾಗಿದೆ. ಆದರೆ ರಸ್ತೆ ಮಾರ್ಗ ಇಲ್ಲದೇ ಜಿನದಮ್ಮಳನ್ನು ಪತಿ ಮತ್ತು ಇತರರು ಸೇರಿ ಬಟ್ಟೆಯಲ್ಲಿ ಸುತ್ತಿಕೊಂಡು ಸಮೀಪದ ಆಸ್ಪತ್ರೆ ತಲುಪಲು ಸುಮಾರು ೧೨ ಕಿ.ಮೀ. ಕ್ರಮಿಸಿದ್ದಾರೆ. 

ಆದರೆ ಮಾರ್ಗ ಮಧ್ಯೆಯೇ ಜಿನದಮ್ಮ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಸೂಕ್ತ ಚಿಕಿತ್ಸೆ ಸಿಗದೇ ಮಗು ಮೃತಪಟ್ಟಿತು ಎಂದು ಮೂಲಗಳು ತಿಳಿಸಿವೆ. ಆಂಧ್ರದ ವಿಜಿನಗರಂ ಸುತ್ತಮುತ್ತಲು ಬುಡಕಟ್ಟು ಜನರು ಹೆಚ್ಚಿನ ಪ್ರಮಾಣದಲ್ಲಿ ವಾಸಿಸುತ್ತಿದ್ದು, ಇವರು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಜೀವನ ಸಾಗಿಸುತ್ತಿದ್ದಾರೆ.

ಈ ಹಿಂದೆಯೂ ಸೂಕ್ತ ಸಮಯದಲ್ಲಿ ಆ್ಯಂಬುಲೆನ್ಸ್ ಬರದೇ ಮಗು ಮತ್ತು ತಾಯಿ ಮೃತಪಟ್ಟಿರುವ ಅನೇಕ ಘಟನೆಗಳು ಜರುಗಿವೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!