ಊಟ ಚೆಲ್ಲಿದ್ದಕ್ಕೆ 6ರ ಬಾಲಕಿಯನ್ನು ಅಮಾನವೀಯವಾಗಿ ಥಳಿಸಿದ ಮಹಿಳೆ; ಬಂಧನ

Published : Jun 06, 2017, 02:50 PM ISTUpdated : Apr 11, 2018, 01:01 PM IST
ಊಟ ಚೆಲ್ಲಿದ್ದಕ್ಕೆ 6ರ ಬಾಲಕಿಯನ್ನು ಅಮಾನವೀಯವಾಗಿ ಥಳಿಸಿದ ಮಹಿಳೆ; ಬಂಧನ

ಸಾರಾಂಶ

ವಾಟ್ಸಪ್ ಹಾಗೂ ಇತರ ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋ ವೈರಲ್ ಆಗಿದ್ದು, ನೋಡುಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.  ವಿಡಿಯೋಗೆ ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು  , ಮಹಿಳೆಯನ್ನು ಬಂಧಿಸಿದ್ದಾರೆ

ಊಟವನ್ನು ಚೆಲ್ಲಿದ್ದಕ್ಕೆ 6 ವರ್ಷದ ಬಾಲಕಿಯನ್ನು ಮಹಿಳೆಯೊಬ್ಬಳು ಕ್ರೂರವಾಗಿ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಿರುವ ಘಟನೆ ಮಲೇಶಿಯಾದಲ್ಲಿ ನಡೆದಿದೆ.

 

ವಿಡಿಯೋನಲ್ಲಿ. ತಮಿಳು ಮಾತನಾಡುತ್ತಿದ್ದ ಮಹಿಳೆ ಬಾಲಕಿಯ ಪೋಷಕರ ಅನುಪಸ್ಥಿತಿಯಲ್ಲಿ ಆಕೆಯನ್ನು ಊಟದ ತಟ್ಟೆಯಿಂದ ಎಬ್ಬಿಸಿ, ಮರದಿಂದ ತಯಾರಿಸಲಾದ ಬೆನ್ನು ತುರಿಸುವ ಉಪಕರಣದಿಂದ ಅತೀ ಕ್ರೂರವಾಗಿ ಥಳಿಸಿದ್ದಾಳೆ. ಆ ಬಾಲಕಿ ಎಷ್ಟು ಬೇಡಿಕೊಂಡರೂ ಆಕೆ ಹೊಡೆಯುದನ್ನು ಮುಂದುವರಿಸಿದ್ದಾಳೆ. ಊಟ ಮಾಡಲು ಗೊತ್ತಿಲ್ವಾ... ನೀನು ಸಾಯು... ಎಂದು ಬೈಯುತ್ತಾಳೆ. ವಿಡಿಯೋ ಮಾಡಿದವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಆದರೆ ವಾಟ್ಸಪ್ ಹಾಗೂ ಇತರ ಸೋಶಿಯಲ್ ಮೀಡಿಯಾದಲ್ಲಿ ಆ ವಿಡಿಯೋ ವೈರಲ್ ಆಗಿದ್ದು, ನೋಡುಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.  ವಿಡಿಯೋಗೆ ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು  , ಮಹಿಳೆಯನ್ನು ಬಂಧಿಸಿದ್ದಾರೆ ಎಂದು ಫ್ರೀ ಮಲೇಶಿಯಾ ಟುಡೇ ವರದಿ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ಯಾನ್ಸರ್ ಪೀಡಿತ ಬಾಲಕಿಯನ್ನು ಬೆಂಬಲಿಸಿ ತಲೆ ಬೋಳಿಸಿಕೊಂಡ ತರಗತಿಯ ಎಲ್ಲಾ ಮಕ್ಕಳು, ಟೀಚರ್
ಒಂದೇ ದಿನದಲ್ಲಿ ₹3.12 ಕೋಟಿ ದಾಖಲೆಯ ತೆರಿಗೆ ಸಂಗ್ರಹಿಸಿದ ಕರ್ನಾಟಕದ ಗ್ರಾಮ ಪಂಚಾಯಿತಿ