
ಬೆಳಗಾವಿ (ಡಿ.20): ಪ್ರವಾಸಿಗರ ಆಕರ್ಷಣೀಯ ತಾಣವಾದ ಬೆಳಗಾವಿಗೆ ಬೋಟಿಂಗೆಂದು ಸಾವಿರಾರು ಜನರು ಆಗಮಿಸುತ್ತಾರೆ. ಆದರೆ ದುರಂತ ಏನಪ್ಪಾ ಅಂದರೆ ಬೋಟಿಂಗ್ ಮಾಡುವ ಜನರು ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವುದಿಲ್ಲ.
ಬೋಟಿಂಗ್ ಮಾಡುವಾಗ ಸುರಕ್ಷಿತ ದೃಷ್ಟಿಯಿಂದ ಲೈಫ್ ಜಾಕೇಟ್ ಬಳಸಲೇಬೇಕು. ಆದರೆ ಬೆಳಗಾವಿಯ ಕೋಟೆ ಕೆರೆಯಲ್ಲಿ ಬೋಟಿಂಗ್ಗೆ ಯುವಕ-ಯುವತಿಯರು, ನವ ಜೋಡಿಗಳು, ಚಿಕ್ಕ ಚಿಕ್ಕ ಮಕ್ಕಳು ತಂದೆ ತಾಯಿ ಜೊತೆ ಬರುತ್ತಾರೆ. ಯಾರೊಬ್ಬರು ಲೈಫ್ ಜಾಕೇಟ್ ಹಾಕಿಕೊಳ್ಳುವುದಿಲ್ಲ. ಏನಾದರೂ ಅನಾಹುತ ಸಂಭವಿಸಿದರೆ ತಕ್ಷಣವೇ ನೆರವಿಗೆ ಧಾವಿಸಲು ಯಾವುದೇ ರಕ್ಷಣಾ ತಂಡವು ಇಲ್ಲಿಲ್ಲ. ಇನ್ನು ಅಸುರಕ್ಷಿತ ಬೋಟಿಂಗ್ ನಡೆಯುತ್ತಿದ್ದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇತ್ತ ಗಮನವೇ ಹರಿಸುತ್ತಿಲ್ಲ.
ಇತ್ತೀಚೆಗೆ ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣದ ದುರಂತ ನಮ್ಮ ಕಣ್ಣ್ಮುಂದಿದೆ. ಹೀಗಿದ್ದರೂ ಕುಂದಾನಗರಿಯಲ್ಲಿ ಡೇಂಜರ್ ಬೋಟಿಂಗ್ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಜಾಣಕುರುಡತನ ಪ್ರದರ್ಶಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.