ಕೆಎಂಸಿ ನಿಯಮ ಉಲ್ಲಂಘಿಸಿದ್ದ ಶಾಸಕರ ವಿರುದ್ಧ ಎಫ್ಐಆರ್'ಗೆ ಸಿದ್ದತೆ?

Published : Dec 20, 2016, 05:32 AM ISTUpdated : Apr 11, 2018, 12:42 PM IST
ಕೆಎಂಸಿ ನಿಯಮ ಉಲ್ಲಂಘಿಸಿದ್ದ ಶಾಸಕರ ವಿರುದ್ಧ ಎಫ್ಐಆರ್'ಗೆ ಸಿದ್ದತೆ?

ಸಾರಾಂಶ

ಬೆಂಗಳೂರಿನ ಜೆ.ಪಿ. ಪಾರ್ಕ್​ ಉದ್ಯಾನವನದಲ್ಲಿ ಶಾಸಕ ಮುನಿರತ್ನ ಭಾವಚಿತ್ರವಿರುವ ಫ್ಲೆಕ್ಸ್​'ಗಳು ರಾರಾಜಿಸುತ್ತಿದೆ. ಈ ಮೂಲಕ ಕೆಎಂಸಿ ನಿಯಮ ಉಲ್ಲಂಘನೆಯಾಗಿದ್ದು, ಫ್ಲೆಕ್ಸ್​ ಹಾಕಿದವರ ವಿರುದ್ಧ ಎಫ್​ ಐಆರ್ ದಾಖಲಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರು(ಡಿ.20): ಬೆಂಗಳೂರಿನ ಜೆ.ಪಿ. ಪಾರ್ಕ್​ ಉದ್ಯಾನವನದಲ್ಲಿ ಶಾಸಕ ಮುನಿರತ್ನ ಭಾವಚಿತ್ರವಿರುವ ಫ್ಲೆಕ್ಸ್​'ಗಳು ರಾರಾಜಿಸುತ್ತಿದೆ. ಈ ಮೂಲಕ ಕೆಎಂಸಿ ನಿಯಮ ಉಲ್ಲಂಘನೆಯಾಗಿದ್ದು, ಫ್ಲೆಕ್ಸ್​ ಹಾಕಿದವರ ವಿರುದ್ಧ ಎಫ್​ ಐಆರ್ ದಾಖಲಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಕೆಎಂಸಿ ನಿಯಮದ ಪ್ರಕಾರ ಉದ್ಯಾನವನದಲ್ಲಿ ಫ್ಲೆಕ್ಸ್​ , ಬ್ಯಾನರ್​'ಗಳ ಪ್ರದರ್ಶನಕ್ಕೆ ಅವಕಾಶವಿಲ್ಲ. ಆದರೆ, ಪಾರ್ಕ್'​ನಲ್ಲಿ ಓಪನ್​ ಜಿಮ್​,ದೀಪ ಬೆಳಗಿಸುವ ಕಾರ್ಯಕ್ರಮವಿದೆ ಎಂದು ಶಾಸಕರ ಭಾವಚಿತ್ರವಿರುವ ಫ್ಲೆಕ್ಸ್ ಹಾಕಲಾಗಿದೆ. ಈ ಸಂಬಂಧ ವಾಯುವಿಹಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಕಾರ್ಪೋರೇಟರ್​ ಮಮತಾ ವಾಸುದೇವ್ ಶಾಸಕರು ನಿಲುವನ್ನು ಖಂಡಿಸಿದ್ದಾರೆ, ಆದರೆ ಶಾಸಕ ಮುನಿರತ್ನ ಮಾತ್ರ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಟಿ ಜನರ ಹೃದಯ ಮೀಟಿದ ಮಾನವ: ನಾನು ರಾಜಕೀಯಕ್ಕೆ ಬಂದಿದ್ದು ದೊಡ್ಡ ತಪ್ಪು ಎಂದಿದ್ದ ವಾಜಪೇಯಿ
'ತೆರಿಗೆ ಶೇ.50 ರಿಂದ 15ಕ್ಕೆ ಇಳಿಸಿ..'ಅಮೆರಿಕದ ಜೊತೆಗಿನ ಒಪ್ಪಂದಕ್ಕೆ ಕೊನೇ ಆಫರ್‌ ನೀಡಿದ ಭಾರತ!