ಲಾಹೋರ್‌ನಲ್ಲೇ ಇದ್ದಾರೆ ಅಭಿನಂದನ್: ವಾಘಾದಲ್ಲಿ ಮುಂದುವರೆದ ಕಾಯುವಿಕೆ!

By Web DeskFirst Published Mar 1, 2019, 8:43 PM IST
Highlights

ಮತ್ತೆ ನರಿ ಬುದ್ದಿ ಪ್ರದರ್ಶಿಸಿದ ಪಾಕಿಸ್ತಾನ| ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ವಿಳಂಬ ಮಾಡುತ್ತಿರುವ ಪಾಕ್| ಅಭಿನಂದನ್ ಇನ್ನೂ ಲಾಹೋರ್‌ನಲ್ಲೇ ಇದ್ದಾರೆ ಎಂಬ ಮಾಹಿತಿ| ಅಭಿನಂದನ್ ಅವರನ್ನು ಇನ್ನೂ ವಾಘಾ ಗಡಿಗೆ ಕರೆತರದ ಪಾಕ್|

ನವದೆಹಲಿ(ಮಾ.01): ಪಾಕ್ ವಶದಲ್ಲಿರುವ ಭಾರತೀಯ ವಾಯುಸೇನೆ ವಿಂಗ್ ಕಮಾಂಡರ್‌ ಅಭಿನಂದನ್ ಬರುವಿಕೆಗಾಗಿ ಇಡೀ ದೇಶ ಕಾತರದಿಂದ ಕಾಯುತ್ತಿದೆ. 

ಆದರೆ ಪಾಕ್ ಮತ್ತೆ ತನ್ನ ನರಿಬುದ್ದಿ ಪ್ರದರ್ಶಿಸಿದ್ದು, ಅಭಿನಂದನ್ ಅವರನ್ನು ಇದುವರೆಗೂ ವಾಘಾ ಗಡಿಗೆ ಕರೆತಂದಿಲ್ಲ ಎಂದು ಮೂಲಗಳು ತಿಳಿಸಿವೆ. ಅಭಿನಂದನ್ ಇನ್ನೂ ಲಾಹೋರ್‌ನಲ್ಲೇ ಇದ್ದು, ಹಸ್ತಾಂತರ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ.

Sources: Pakistan has changed the timing of handover of IAF's Wing Commander twice. Indian defence minister is keeping a close watch on proceedings. The handover might now take place at 9 pm tonight. pic.twitter.com/2GUIzhrP89

— ANI (@ANI)

ಇದಕ್ಕೂ ಮೊದಲು ಪಾಕಿಸ್ತಾನದ ಸೇನಾಧ್ಯಕ್ಷ ಅಮೆರಿಕ, ಆಸ್ಟ್ರೆಲೀಯಾಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದು, ಅಭಿನಂದನ್ ಹಸ್ತಾಂತರದ ಬಳಿಕ ಭಾರತ ಮತ್ತೆ ದಾಳಿ ಮಾಡಿದರೆ ಯುದ್ಧ ಮಾಡಲು ಪಾಕಿಸ್ತಾನ ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದರು.

ಈ ಮೊದಲು ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂಬ ಸುದ್ದಿ ಬಿತ್ತರವಾಗಿತ್ತು. ಆದರೆ ಸಲಿಗೆ ಅಭಿನಂದನ್ ಇನ್ನೂ ಲಾಹೋರ್‌ನಲ್ಲೇ ಇದ್ದು, ಹಸ್ತಾಂತರ ಪ್ರಕ್ರಿಯೆ ಯಾವಾಗ ನಡೆಯಲಿದೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲವಾಗಿದೆ.

click me!