ಇನ್ನೂ ನಿಂತಿಲ್ಲ ಉಗ್ರರ ಉಪಟಳ, ಇಬ್ಬರು ಯೋಧರು, ಇಬ್ಬರು ಪೊಲೀಸರು ಹುತಾತ್ಮ

Published : Mar 01, 2019, 07:00 PM ISTUpdated : Mar 01, 2019, 07:17 PM IST
ಇನ್ನೂ ನಿಂತಿಲ್ಲ ಉಗ್ರರ ಉಪಟಳ, ಇಬ್ಬರು ಯೋಧರು, ಇಬ್ಬರು ಪೊಲೀಸರು ಹುತಾತ್ಮ

ಸಾರಾಂಶ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ಸುರಕ್ಷಿತವಾಗಿ ವಾಪಸ್ ಆಗಿದ್ದಾಗಿನಿಂದ, ಇಂಡೋ-ಪಾಕ್ ಗಡಿಯಲ್ಲಿ ಉಗ್ರರು ಹತಾಶೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಲೇ ಇದ್ದಾರೆ.

ಶ್ರೀನಗರ, [ಮಾ.01]: ಪಾಕಿಸ್ತಾನ ಮತ್ತು ಭಾರತದ ಗಡಿಯಲ್ಲಿ ಉದ್ವಿಗ್ನದ ವಾತಾವರಣ ಇದೆ. ಇದರ ಮಧ್ಯೆ ಉಗ್ರರ ಕಿರಿಕ್ ಕಡಿಮೆಯಾಗುತ್ತಿಲ್ಲ.

ಭಾರತ ಗಡಿ ಕುಪ್ವಾರಾ ಪ್ರದೇಶದಲ್ಲಿ ಇಂದು [ಶುಕ್ರವಾರ] ಉಗ್ರರು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು CRPF ಯೋಧರು ಹಾಗೂ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ.

ಗಡಿ ನಿಯಂತ್ರಣರೇಖೆ ಉಲ್ಲಂಘಿಸಿ ಪಾಕಿಸ್ತಾನ ಯೋಧರಿಂದ ಪದೇ-ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ಮತ್ತೊಂದೆಡೆ ಉಗ್ರರು ಸಹ ಗಡಿಯಲ್ಲಿ ಭಾರತೀಯ ಸೇನೆ ಮೇಲೆ ದಾಳಿ ನಡೆಸುತ್ತಿದೆ.

ಇದ್ರಿಂದ ಭಾರತ ಸೇನೆಗೆ 2 ಸವಾಲುಗಳನ್ನು ಮೆಟ್ಟಿನಿಲ್ಲಬೇಕಿದೆ. ಒಂದು ಕಡೆ ಪಾಕ್ ಸೇನೆ ಪುಂಡಾ ಹಾಗೂ ಮತ್ತೊಂದೆಡೆ ಉಗ್ರರನ್ನು ಸೆದೆಬಡಿಯುವುದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ರೈಲಿಗೆ ಸಿಲುಕಿ ಯುವಕನ ಎಡಗೈ ಕಟ್; ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರು!
ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!