ದೋಸ್ತಿಗಳ ಅಚ್ಚರಿ ತೀರ್ಮಾನ: ಸಿದ್ದರಾಮಯ್ಯ ಮತ್ತೆ ಸಿಎಂ?

By Web DeskFirst Published Jul 6, 2019, 5:56 PM IST
Highlights

ರಾಜೀನಾಮೆ ಪರ್ವ ಸಮೂಹ ಸನ್ನಿಯಾಗಿ ಬದಲಾಗಿದ್ದರೆ ಇತ್ತ ರಾಜಕಾರಣದ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ವಲಯದಲ್ಲಿ ಹೊಸ ಮಾತುಕತೆ ಶುರುವಾಗಿದೆ. ಸರಕಾರ ಉಳಿಸುಕೊಳ್ಳಲು ಹೊಸದಾದ ರಣತಂತ್ರ ಸಿದ್ಧಮಾಡಲಾಗುತ್ತಿದ್ದು ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿದ್ದಾರಾ? ಎಂಬ ಮಾತು ಕೇಳಿ ಬಂದಿದೆ.

ಬೆಂಗಳೂರು(ಜು. 06) ಅತೃಪ್ತ ಶಾಸಕರ ರಾಜೀನಾಮೆಯಿಂದ ಕರ್ನಾಟಕದ ದೋಸ್ತಿ ಸರಕಾರ ಅಲ್ಪ ಮತಕ್ಕೆ ಕುಸಿಯುವ ಸಂಕಟದಲ್ಲಿರುವಾಗ ಅದರಿಂದ ಪಾರಾಗಲು ಹೊಸ ತಂತ್ರದ ಮೊರೆ ಹೋಗಿದೆ ಎಂಬ ಮಾತು ಕೇಳಿ ಬಂದಿದೆ.

ಹಾಗಾದರೆ ಏನಿದು ಹೊಸ ತಂತ್ರ. ಈಗ ರಾಜೀನಾಮೆ ಕೊಟ್ಟಿರುವ ಪಟ್ಟಿಯಲ್ಲಿರುವ ಅನೇಕ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯ ಕಟ್ಟಾ ಬೆಂಬಲಿಗರು. ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಮತ್ತೆ ಮತ್ತೆ ಹೇಳಿಕೊಂಡು ಬಂದವರು. ಹಾಗಾದರೆ ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನೇ ಸಿಎಂ ಮಾಡಿ ಈ  ಅತೃಪ್ತ ಶಾಸಕರ ಮನೊಲಿಸಬಹುದೆ? ಎಂಬ ಚರ್ಚೆ ಆರಂಭವಾಗಿದೆ.

ಶಾಸಕರ ಸಾಮೂಹಿಕ ರಾಜೀನಾಮೆ..ಕರ್ನಾಟಕದಲ್ಲಿ ಏನಾಗ್ತಾಇದೆ?

ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಬೇರೆ ಆಯ್ಕೆಗಳು ಉಳಿದುಕೊಂಡಂತೆ ಕಾಣುತ್ತಿಲ್ಲ. ಹೇಗಾದರೂ ಮಾಡಿ ಶಾಸಕರ ಮನವೊಲಿಸಿದರೆ ಮಾತ್ರವೇ ಸರ್ಕಾರ ಸೇಫ್ ಮಾಡಿಕೊಳ್ಳಬಹುದು. ಶನಿವಾರ ಸಂಜೆ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬೆಂಗಳೂರಿಗೆ ಆಗಮಿಸಲಿದ್ದು ಹಿರಿಯ ನಾಯಕರ ಸಭೆ ನಂತರ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.


 

click me!