ಬಿಜೆಪಿ ಆತ್ಮಾವಲೋಕನ ಸಭೆ: ಈಶ್ವರಪ್ಪ ಬರ್ತಾರಾ?

By Suvarna Web DeskFirst Published Apr 22, 2017, 8:31 AM IST
Highlights

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿನ ಸೋಲಿನ ಕುರಿತು ಬಿಜೆಪಿಯ ಆತ್ಮಾವಲೋ ಕನ ಸಭೆ ಭಾನುವಾರ ನಡೆಯಲಿದೆ. ನಗರದ ಪಕ್ಷದ ಕಚೇರಿಯಲ್ಲಿ ಈ ಸಭೆ ನಡೆಯಲಿದ್ದು, ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಸೋಲಿನ ಪರಾಮರ್ಶೆ ನಡೆಯಲಿದೆ.

ಬೆಂಗಳೂರು (ಏ.22): ಭಾನುವಾರದ ಆತ್ಮಾವಲೋಕನ ಸಭೆಯಲ್ಲಿ ಮತ್ತೆ ಬಂಡಾಯದ ಧ್ವನಿ ಹೊರಹಾಕುತ್ತಿರುವ ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್‌.ಈಶ್ವರಪ್ಪ ಅವರು ಪಾಲ್ಗೊಳ್ಳುವ ಬಗ್ಗೆ ಅನುಮಾನವಿದೆ.

ಪದಾಧಿಕಾರಿ ಗಳ ನೇಮಕ ಹಾಗೂ ನಂಜನಗೂಡು- ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾ ವಣೆಯಲ್ಲಿನ ಉಪಚುನಾವಣೆ ಯಲ್ಲಿನ ಹಲವು ಕ್ರಮಗಳ ಬಗ್ಗೆ ಅಸಮಾಧಾನಗೊಂಡಿರುವ ಈಶ್ವರಪ್ಪ ಅವರು ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಅತೃಪ್ತಿ ಹೊರಹಾಕಿದ್ದಾರೆ.

ಹೀಗಾಗಿ, ಭಾನುವಾರದ ಸಭೆಗೆ ಪಾಲ್ಗೊಂಡು ಮುಖಾಮುಖಿಯಾಗುತ್ತಾರಾ ಎಂಬುದು ಕುತೂಹಲಕರವಾಗಿದೆ.

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿನ ಸೋಲಿನ ಕುರಿತು ಬಿಜೆಪಿಯ ಆತ್ಮಾವಲೋ ಕನ ಸಭೆ ಭಾನುವಾರ ನಡೆಯಲಿದೆ. ನಗರದ ಪಕ್ಷದ ಕಚೇರಿಯಲ್ಲಿ ಈ ಸಭೆ ನಡೆಯಲಿದ್ದು, ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಸೋಲಿನ ಪರಾಮರ್ಶೆ ನಡೆಯಲಿದೆ.

ಇದಕ್ಕಾಗಿ ಉಪ ಚುನಾವಣೆಯಲ್ಲಿ ಉಸ್ತುವಾರಿ ವಹಿಸಿಕೊಂ ಡಿದ್ದ ಮುಖಂಡರನ್ನೂ ಸೇರಿದಂತೆ ಸುಮಾರು 25 ಮಂದಿ ಹಿರಿಯ ಮುಖಂ ಡರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.

click me!