ಉಪ ಚುನಾವಣೆ ಸೋಲು: ನಾಳೆ ಬಿಜೆಪಿ ಆತ್ಮಾವಲೋಕನ

By Suvarna Web DeskFirst Published Apr 22, 2017, 8:12 AM IST
Highlights

ಉಪ ಚುನಾವಣೆಯಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದ ಮುಖಂಡರನ್ನೂ ಸೇರಿದಂತೆ ಸುಮಾರು 25 ಮಂದಿ ಹಿರಿಯ ಮುಖಂ ಡರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಚುನಾವಣಾ ಪ್ರಚಾರದಲ್ಲಿ ಸಂಘಟಿತ ಪ್ರಯತ್ನ ನಡೆಯದಿರುವುದು ಕೂಡ ಸೋಲಿಗೆ ಕಾರಣವಾಯಿತು ಎಂಬ ಮಾತನ್ನು ಖುದ್ದು ಯಡಿಯೂರಪ್ಪ ಅವರೇ ಫಲಿತಾಂಶದ ನಂತರ ಹೇಳಿದ್ದರು.

ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿನ ಸೋಲಿನ ಕುರಿತು ಬಿಜೆಪಿಯ ಆತ್ಮಾವಲೋ ಕನ ಸಭೆ ಭಾನುವಾರ ನಡೆಯಲಿದೆ. ನಗರದ ಪಕ್ಷದ ಕಚೇರಿಯಲ್ಲಿ ಈ ಸಭೆ ನಡೆಯಲಿದ್ದು, ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಸೋಲಿನ ಪರಾಮರ್ಶೆ ನಡೆಯಲಿದೆ.

ಇದಕ್ಕಾಗಿ ಉಪ ಚುನಾವಣೆಯಲ್ಲಿ ಉಸ್ತುವಾರಿ ವಹಿಸಿಕೊಂ ಡಿದ್ದ ಮುಖಂಡರನ್ನೂ ಸೇರಿದಂತೆ ಸುಮಾರು 25 ಮಂದಿ ಹಿರಿಯ ಮುಖಂ ಡರಿಗೆ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಚುನಾವಣಾ ಪ್ರಚಾರದಲ್ಲಿ ಸಂಘಟಿತ ಪ್ರಯತ್ನ ನಡೆಯದಿರುವುದು ಕೂಡ ಸೋಲಿಗೆ ಕಾರಣವಾಯಿತು ಎಂಬ ಮಾತನ್ನು ಖುದ್ದು ಯಡಿಯೂರಪ್ಪ ಅವರೇ ಫಲಿತಾಂಶದ ನಂತರ ಹೇಳಿದ್ದರು.

ಇದೇ ವೇಳೆ ಪ್ರಚಾರದ ವೇಳೆ ರಣತಂತ್ರ ರೂಪಿಸಲು ಪಕ್ಷದ ಎಲ್ಲ ಹಿರಿಯ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರ ಗಳನ್ನು ಕೈಗೊಳ್ಳಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ, ಭಾನುವಾರದ ಸಭೆ ಸಹಜವಾಗಿಯೇ ಸ್ಪಲ್ಪ ಬಿಸಿ ಬಿಸಿ ಚರ್ಚೆ ನಡೆಯುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

click me!