
ತಿರುವನಂತಪುರ : ಶಬರಿಮಲೆ ದೇಗುಲ ಪ್ರವೇಶಿಲು ತೆರಳಿ ದೇಗುಲ ಪ್ರವೇಶಿಸದೇ ವಾಪಸಾದ ತೃಪ್ತಿ ದೇಸಾಯಿ ಮುಂದಿನ ಬಾರಿ ಶಬರಿಮಲೆಗೆ ತೆರಳಲು ಯಾವುದೇ ರೀತಿಯ ಮುನ್ಸೂಚನೆಯನ್ನೂ ಕೂಡ ನೀಡದೇ ಗೆರಿಲ್ಲ ತಂತ್ರವನ್ನು ಬಳಸಿ ದೇಗುಲಕ್ಕೆ ತೆರಳುವುದಾಗಿ ಹೇಳಿದ್ದಾರೆ.
ದೇಗುಲ ಪ್ರವೇಶಿಸುವ ಸಲುವಾಗಿಯೇ ಕೇರಳಕ್ಕೆ ತೆರಳಿದ್ದ ಅವರಿಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿಯೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಶಬರಿಮಲೆಗೆ ತೆರಳಲು ಯಾವುದೇ ಟ್ಯಾಕ್ಸಿ ಸೇರಿದಂತೆ ವಾಹನ ಸೌಕರ್ಯ ದೊರಕಿರಲಿಲ್ಲ.
ಇದರಿಂದ ನಿರಾಶರಾಗಿ ತೃಪ್ತಿ ದೇಸಾಯಿ ಹಾಗೂ ಅವರ ಬೆಂಬಲಿಗರು ಮರಳಿದ್ದರು. ಆದರೆ ಮುಂದಿನ ಬಾರಿ ಪೊಲೀಸರು ದೇಗುಲಕ್ಕೆ ತೆರಳಲು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಯಾವುದೇ ಸುಳಿವನ್ನೂ ಕೂಡ ನೀಡದೇ ಅಯ್ಯಪ್ಪನ ದರ್ಶನ ಪಡೆಯುವುದಾಗಿ ಹೇಳಿದ್ದಾರೆ.
ದೇಗುಲಕ್ಕೆ ತೆರಳಲು ಕೇರಳಕ್ಕೆ ಹೋದಾಗ ಅನೇಕ ರೀತಿಯಲ್ಲಿ ಪ್ರತಿಭಟನೆ ನಡೆಯಿತು. 50 ವರ್ಷದ ಒಳಗಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ವಿರೋಧಿಸಿ ವಿವಿಧ ಸಂಘಟನೆಗಳು ಕೇರಳದಲ್ಲಿ ಪ್ರತಿಭಟನೆ ನಡೆಸುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ