ಸಂಬಳ ಸಿಗುತ್ತಾ?: ಬ್ಯಾಂಕ್'ಗಳಲ್ಲಿ ಎದುರಾಗಿದೆ ನಗದು ಸಮಸ್ಯೆ

By Suvarna Web DeskFirst Published Dec 1, 2016, 2:51 AM IST
Highlights

ಪ್ರಧಾನಿ ಮೋದಿ ನೋಟ್ ಬ್ಯಾನ್ ನಿರ್ಧಾರ ತಿಂಗಳ ಕೊನೆಯಲ್ಲಿ ಸಂಬಳ ಪಡೆಯುವ ನೌಕರರಿಗೆ, ಕಾರ್ಮಿಕರಿಗೆ ಭಾರಿ ಬಿಸಿ ಮುಟ್ಟಿಸಿದೆ. ಬಹುತೇಕ ಬ್ಯಾಂಕ್, ಎಟಿಎಂಗಳು ಹಣವಿಲ್ಲದೆ ಖಾಲಿಯಾಗಿವೆ. ಇದರಿಂದಾಗಿ ನವೆಂಬರ್ ತಿಂಗಳ ಸಂಬಳ ಪಡೆಯುವವರು ಆತಂಕಕ್ಕೊಳಗಾಗಿದ್ದಾರೆ. ನವೆಂಬರ್ 30 ರಿಂದ ಡಿಸೆಂಬರ್ 10ರವರೆಗೂ ವಿವಿಧ ಸರ್ಕಾರಿ, ಖಾಸಗಿ, ಕಾರ್ಪೊರೇಟ್ ಸಂಸ್ಥೆಗಳು ತಮ್ಮ ನೌಕರರಿಗೆ ವೇತನ ನೀಡುತ್ತವೆ. ಅದರಂತೆ ನೌಕರರು ವೇತನ ಪಡೆಯಲು ಬ್ಯಾಂಕ್​ಗಳಿಗೆ ಮುಗಿ ಬೀಳುತ್ತಿದ್ದಾರೆ. ಆದ್ರೆ ಹಣ ನೀಡಲು ಬ್ಯಾಂಕುಗಳಿಗೆ ಹಣವೇ ಇಲ್ಲ.

ನವದೆಹಲಿ(ನ.12): ಕೇಂದ್ರ ಸರ್ಕಾರದ ನೋಟು ರದ್ದು ಕ್ರಮದಿಂದ ಎಲ್ಲ ಬ್ಯಾಂಕ್​ಗಳಲ್ಲೂ ಹಣದ ಅಭಾವ ತಲೆದೋರಿದೆ. ನವೆಂಬರ್ ತಿಂಗಳ ವೇತನ ಪಡೆಯಲು ನೌಕರ ವರ್ಗ ಪರದಾಡುತ್ತಿದೆ. ಸ್ಯಾಲರಿ ಸಂಕಷ್ಟದ ಬಗ್ಗೆ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.

ಬ್ಯಾಂಕ್, ಎಟಿಎಂಗಳಲ್ಲಿ ಹಣದ ಕೊರತೆ: ವೇತನ ಪಡೆಯಲು ನೌಕರ ವರ್ಗ ಪರದಾಟ

Latest Videos

ಪ್ರಧಾನಿ ಮೋದಿ ನೋಟ್ ಬ್ಯಾನ್ ನಿರ್ಧಾರ ತಿಂಗಳ ಕೊನೆಯಲ್ಲಿ ಸಂಬಳ ಪಡೆಯುವ ನೌಕರರಿಗೆ, ಕಾರ್ಮಿಕರಿಗೆ ಭಾರಿ ಬಿಸಿ ಮುಟ್ಟಿಸಿದೆ. ಬಹುತೇಕ ಬ್ಯಾಂಕ್, ಎಟಿಎಂಗಳು ಹಣವಿಲ್ಲದೆ ಖಾಲಿಯಾಗಿವೆ. ಇದರಿಂದಾಗಿ ನವೆಂಬರ್ ತಿಂಗಳ ಸಂಬಳ ಪಡೆಯುವವರು ಆತಂಕಕ್ಕೊಳಗಾಗಿದ್ದಾರೆ.

ನವೆಂಬರ್ 30 ರಿಂದ ಡಿಸೆಂಬರ್ 10ರವರೆಗೂ ವಿವಿಧ ಸರ್ಕಾರಿ, ಖಾಸಗಿ, ಕಾರ್ಪೊರೇಟ್ ಸಂಸ್ಥೆಗಳು ತಮ್ಮ ನೌಕರರಿಗೆ ವೇತನ ನೀಡುತ್ತವೆ. ಅದರಂತೆ ನೌಕರರು ವೇತನ ಪಡೆಯಲು ಬ್ಯಾಂಕ್​ಗಳಿಗೆ ಮುಗಿ ಬೀಳುತ್ತಿದ್ದಾರೆ. ಆದ್ರೆ ಹಣ ನೀಡಲು ಬ್ಯಾಂಕುಗಳಿಗೆ ಹಣವೇ ಇಲ್ಲ.

ಸರ್ಕಾರ, ಖಾಸಗಿ ನೌಕರರ ದೈನಂದಿನ ವ್ಯವಹಾರ ಬಹುತೇಕ ನಗದಿನಲ್ಲೇ ನಡೆಯಲಿದೆ. ಹಾಗಾಗಿ ಎಲ್ಲರೂ ಬ್ಯಾಂಕು, ಎಟಿಎಂಗಳಿಂದ ಹಣ ಡ್ರಾ ಮಾಡಲೇಬೇಕು. ಆದ್ರೆ ಬ್ಯಾಂಕ್ ಗಳಲ್ಲೇ ಹಣ ಇಲ್ಲವೆಂದರೆ ಎಲ್ಲಿಗೆ ಹೋಗಬೇಕು ಎನ್ನುವುದು ನೌಕರರ ಅಳಲು.

ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಅರ್ಧ ಸಂಬಳ

ಈ ಮಧ್ಯೆ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗೆ  ಅರ್ಧ ಸಂಬಳ ನೀಡಲಾಗುತ್ತಿದೆ. ಇನ್ನು ಹಲವೆಡೆ  ನೇರವಾಗಿ ಚೆಕ್ ವಿತರಿಸಲಾಗುತ್ತದೆ.

ನವೆಂಬರ್‌ನಲ್ಲಿ ಬಿಎಂಟಿಸಿಗೆ ಶೇ.35ರಷ್ಟು ನಷ್ಟ

ಇನ್ನು  ನೋಟು ರದ್ದಿನಿಂದಾದ ಚಿಲ್ಲರೆ ಸಮಸ್ಯೆಯಿಂದ ಬಿಎಂಟಿಸಿಗೆ ಈ ತಿಂಗಳು ಶೇ.35ರಷ್ಟು ನಷ್ಟವಾಗಿದ್ದು ನೌಕರರಿಗೆ ವೇತನ ನೀಡುವುದು ಹೇಗೆ ಎನ್ನುವ ತೊಳಲಾಟದಲ್ಲಿದೆ ಬಿಎಂಟಿಸಿ. ಇದು ನೌಕರರನ್ನು ಚಿಂತೆಗೀಡುಮಾಡಿದೆ. ೊಟ್ಟಿನಲ್ಲಿ ನೋಟ್ ಬ್ಯಾನ್ ನಿಂದ  ಈ ತಿಂಗಳು ಸಂಬಳ ಪಡೆಯುವವರ ಸ್ಥಿತಿ ಹೇಳತೀರದ್ದಾಗಿದೆ.

click me!