30 ಲಕ್ಷ ವಲಸಿಗರ ಗಡಿಪಾರು ಮಾಡುವೆವು: ಟ್ರಂಪ್ ಘೋಷಣೆ

Published : Nov 14, 2016, 04:48 AM ISTUpdated : Apr 11, 2018, 12:56 PM IST
30 ಲಕ್ಷ ವಲಸಿಗರ ಗಡಿಪಾರು ಮಾಡುವೆವು: ಟ್ರಂಪ್ ಘೋಷಣೆ

ಸಾರಾಂಶ

ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಣೆ | ಸೋಲಿಗೆ ಎಫ್‌ಬಿಐ ನಿರ್ದೇಶಕ ಕಾರಣವೆಂದ ಹಿಲರಿ

ವಾಷಿಂಗ್ಟನ್‌ (ನ.14): ಅಮೆರಿಕದ ಅಧ್ಯಕ್ಷ ಚುನಾವಣೆ ಪ್ರಚಾರದ ವೇಳೆ ವಲಸಿಗರನ್ನು ಅಮೆರಿಕದಿಂದ ಹೊರ ಹಾಕುವುದಾಗಿ ರಿಪಬ್ಲಿಕನ್‌ ಪಕ್ಷದ ನಾಯಕ ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದರು. ಇದೀಗ ನಿಯೋಜಿತ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು ತಮ್ಮ ಪಕ್ಷದ ಕಠಿಣ ನಿಲುವು ಜಾರಿ ಮಾಡಲು ಮುಂದಾಗಿದ್ದಾರೆ. ಸಮರ್ಪಕ ದಾಖಲೆಗಳನ್ನು ಹೊಂದಿರದ 30 ಲಕ್ಷ ವಲಸೆಗಾರರನ್ನು ಅಮೆರಿಕದಿಂದ ಹೊರಹಾಕುವ ಮಾತುಗಳನ್ನು ಭಾನುವಾರ ಅವರು ಆಡಿದ್ದಾರೆ.

‘‘ಅಪರಾಧ ಮತ್ತು ಅಪರಾಧ ಹಿನ್ನೆಲೆ ಇರುವವರು, ಗ್ಯಾಂಗ್‌ ಸದಸ್ಯರು, ಡ್ರಗ್‌ ಜಾಲದಲ್ಲಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ,''ಎಂದು ಅವರು ‘ಸಿಬಿಎಸ್‌ ನ್ಯೂಸ್‌'ಗೆ ತಿಳಿಸಿದ್ದಾರೆ. ಈ ನಡುವೆ ಟ್ರಂಪ್‌ ಗೆದ್ದ ಬಳಿಕ 200 ಅಧಿಕ ಜನಾಂಗೀಯ ದ್ವೇಷದ ಪ್ರಕರಣಗಳು ದಾಖಲಾಗಿವೆ ಎಂದು ಸದರ್ನ್‌ ಪಾರ್ಟಿ ಲಾ ಸೆಂಟರ್‌ ಅಧ್ಯಕ್ಷ ರಿಚರ್ಡ್‌ ಕೊಹೆನ್‌ ಹೇಳಿದ್ದಾರೆ.

ಎಫ್‌ಬಿಐ ನಿರ್ದೇಶಕ ಕಾರಣ ತಮ್ಮ ಸೋಲಿಗೆ ಎಫ್‌ಬಿಐ ನಿರ್ದೇಶಕ ಜೇಮ್ಸ್‌ ಕೊಮಿ ಕಾರಣ ಎಂದು ಅಮೆ​ರಿಕದ ಡೆಮಾಕ್ರಟಿಕ್‌ ಪಕ್ಷದ ಪರಾಜಿತ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಆಪಾದಿಸಿದ್ದಾರೆ. ಚುನಾವಣೆಗೆ ಕೆಲವೇ ದಿನಗಳಿರುವಾಗ ಇಮೇಲ್‌ ಖಾತೆ ತನಿಖೆಯ ನಿರ್ಧಾರ​ ಪುನರ್‌ ಪರಿಶೀಲಿಸಿರುವುದು ಟ್ರಂಪ್‌ ವಿರುದ್ಧ ಸೋಲಲು ಕಾರಣ​ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!