ಕರ್ತಾರ್‌ಪುರ ಯಾತ್ರೆ: ಅನುಮತಿ ನೀಡಿದ ಬೆನ್ನಲ್ಲೇ ಷರತ್ತು ವಿಧಿಸಿದ ಪಾಕ್!

By Web DeskFirst Published Dec 30, 2018, 8:15 AM IST
Highlights

ಯಾತ್ರಿಗಳ ವಿವರ 3 ದಿನ ಮೊದಲೇ ಕೊಡಬೇಕು| ನಿತ್ಯ 500 ಮಂದಿಗಷ್ಟೇ ಅವಕಾಶ ನೀಡುವ ಪ್ರಸ್ತಾವ

ನವದೆಹಲಿ[ಡಿ.30]: ಸಿಖ್‌ ಧರ್ಮ ಸಂಸ್ಥಾಪಕ ಬಾಬಾ ಗುರುನಾನಕ್‌ ಅವರ ಸಮಾಧಿ ಸ್ಥಳವಿರುವ ಕರ್ತಾರ್‌ಪುರದ ದರ್ಬಾರ್‌ ಸಾಹೀಬ್‌ ಗುರುದ್ವಾರಕ್ಕೆ ಭೇಟಿ ನೀಡಲು ಭಾರತೀಯ ಸಿಖ್ಖರಿಗೆ ಅನುವು ಮಾಡಿಕೊಡುವುದಾಗಿ ಹೇಳಿದ್ದ ಪಾಕಿಸ್ತಾನ ಇದೀಗ ಭಾರತದ ಮುಂದೆ ಹಲವು ಷರತ್ತುಗಳನ್ನು ಇಡಲು ಮುಂದಾಗಿದೆ.

ಗುರುದ್ವಾರಕ್ಕೆ ಭೇಟಿ ನೀಡುವ ಭಾರತೀಯ ಯಾತ್ರಿಗಳಿಗೆ ಭದ್ರತಾ ಅನುಮತಿ ಪ್ರಮಾಣಪತ್ರ ನೀಡಿ, ಅದನ್ನು 3 ದಿನ ಮುಂಚೆಯೇ ತನಗೆ ತಿಳಿಸಬೇಕು. ಪ್ರತಿನಿತ್ಯ 15 ಬ್ಯಾಚುಗಳಲ್ಲಿ 500 ಯಾತ್ರಾರ್ಥಿಗಳಿಗಷ್ಟೇ ಅವಕಾಶ. ಎಲ್ಲ ದಾಖಲೆ ಸರಿ ಇದ್ದು, ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಯಾತ್ರೆಯನ್ನು ರದ್ದುಗೊಳಿಸುವ ಅಥವಾ ಮೊಟಕುಗೊಳಿಸುವ ಅಧಿಕಾರ ತನಗೆ ಇರುತ್ತದೆ ಎಂದು ಭಾರತಕ್ಕೆ ತಿಳಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಈ ಪ್ರಸ್ತಾವಗಳು ಭಾರತಕ್ಕೆ ಅಧಿಕೃತವಾಗಿ ತಲುಪಿಲ್ಲವಾದರೂ, ಪಾಕಿಸ್ತಾನದ ಮಾಧ್ಯಮಗಳಿಗೆ ಸೋರಿಕೆಯಾಗಿವೆ. ಕರಡು ದಾಖಲೆ ಸಿದ್ಧವಾಗಿದೆ. ಆದರೆ ಈವರೆಗೂ ಸರ್ಕಾರ ಒಪ್ಪಿಗೆ ಕೊಟ್ಟಿಲ್ಲ, ಭಾರತದ ಜತೆಗೂ ಹಂಚಿಕೊಂಡಿಲ್ಲ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

click me!