ಅಕ್ಷಯ್ ಕುಮಾರ್ ಆಗಲಿದ್ದಾರೆ ಪ್ರಧಾನಿ?

By Suvarna Web DeskFirst Published Jun 21, 2017, 1:07 PM IST
Highlights

ಮೋದಿ ಜೀವನದ ಬಗ್ಗೆ ಸಿನೆಮಾ ನಿರ್ಮಾಣ ಇನ್ನೂ ವಿಚಾರದ ಹಂತದಲ್ಲಿದ್ದು, ನಾಯಕ ನಟನ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.  ಪರೇಶ್ ರಾವಲ್ ಹಾಗೂ ಅನುಪಮ್ ಖೇರ್ ಅವರಿಗಿಂತ ಹೆಚ್ಚಾಗಿ ಅಕ್ಷಯ್ ಕುಮಾರ್ ಉತ್ತಮ ಆಯ್ಕೆ ಎಂಬ ಮಾತು ಕೇಳಿಬಂದಿದೆ.

ಪ್ರಧಾನಿ ಮೋದಿಯವರ ಮೇಲೆ ಸಿನೆಮಾ ಬರುವುದಾದರೆ ಅವರ ಪಾತ್ರವನ್ನು ನಟ ಅಕ್ಷಯ್ ಕುಮಾರ್’ಗಿಂತ ಹೆಚ್ಚು ಸಮರ್ಥವಾಗಿ ಇನ್ನಾರು ಮಾಡಲಾರರು. ಅವರಿಬ್ಬರು ಇಮೇಜ್ ಹಾಗೂ ದೂರದೃಷ್ಟಿಯಲ್ಲಿ ಸಾಮ್ಯತೆ ಇದೆ.  ಅವರು ನಿರ್ಮಿಸುತ್ತಿರುವ ಟಾಯ್ಲೆಟ್-ಏಕ್ ಪ್ರೇಮ್ ಕಥಾ ಹಾಗೂ ಪದ್ಮನ್ ಸಮಾಜ ಸುಧಾರಣಾ ಸಿನೆಮಾಗಳು ಅದಕ್ಕೆ ಸಾಕ್ಷಿ.  ಮೋದಿ ತರಹ ಅವರು ಕೂಡಾ ಶ್ರಮಪಟ್ಟು ಈ ದರ್ಜೆಗೇರಿದ್ದಾರೆ. ಆದುದರಿಂದ ಅಕ್ಷಯ್ ಕುಮಾರ್ ಅವರೇ ಮೋದಿ ಪಾತ್ರದಲ್ಲಿ ಅಭಿನಯಿಸಬೇಕೆಂದು ಕೇಂದ್ರೀಯ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪಹ್ಲಾಜ್ ನಿಹಲಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಡಿಎನ್’ಏ ವರದಿ ಮಾಡಿದೆ.

ಮೋದಿ ಜೀವನದ ಬಗ್ಗೆ ಸಿನೆಮಾ ನಿರ್ಮಾಣ ಇನ್ನೂ ವಿಚಾರದ ಹಂತದಲ್ಲಿದ್ದು, ನಾಯಕ ನಟನ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.  ಪರೇಶ್ ರಾವಲ್ ಹಾಗೂ ಅನುಪಮ್ ಖೇರ್ ಅವರಿಗಿಂತ ಹೆಚ್ಚಾಗಿ ಅಕ್ಷಯ್ ಕುಮಾರ್ ಉತ್ತಮ ಆಯ್ಕೆ ಎಂಬ ಮಾತು ಕೇಳಿಬಂದಿದೆ. 2014ರಿಂದಲೂ ಮೋದಿ ಜೀವನಾಧರಿತ ಸಿನೆಮಾ (ಬಯೋಪಿಕ್) ನಿರ್ಮಾಣ ಮಾಡುವ ಬಗ್ಗೆ ಮಾತುಗಳೇ ಕೇಳಿಬರುತ್ತಿದೆ.   ಈ ಮುಂಚೆ ಪರೇಶ್ ರಾವಲ್ ಅವರೇ ಪ್ರಧಾನಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಬಿಜೆಪಿ ಇನ್ನೋರ್ವಾ ನಾಯಕ ಹಾಗೂ ನಟ ಶತ್ರುಘ್ನ ಸಿನ್ಹಾ ಕೂಡಾ ಅಕ್ಷಯ್ ಕುಮಾರ್ ಪರವಾಗಿದ್ದಾರೆ ಎನ್ನಲಾಗಿದೆ.  

ಅಕ್ಷಯ್ ಕುಮಾರ್ 2 ಸಿನೆಮಾಗಳು ಶೀಘ್ರದಲ್ಲೇ ಹೊರಬರಲಿವೆ. ಅದರಲ್ಲಿ ‘ಟಾಯ್ಲೆಟ್- ಏಕ್ ಪ್ರೇಮ್ ಕಥಾ’ವು ಭಾರತ ಸರ್ಕಾರದ ಮಹತ್ವದ ಸ್ವಚ್ಛ ಭಾರತ ಅಭಿಯಾನದ ದ್ದೇಶವನ್ನೇ ಹೊಂದಿದೆ. ಅದರ ಟ್ರೈಲರ್’ನ್ನು ಪ್ರಧಾನಿ ಮೋದಿ ಕೂಡಾ ಮೆಚ್ಚಿದ್ದಾರೆನ್ನಲಾಗಿದೆ.

click me!