ತಬ್ಬಲಿ ಮಕ್ಕಳ ದತ್ತು : ಸಿಧು ಘೋಷಣೆ

By Web DeskFirst Published Oct 23, 2018, 6:22 PM IST
Highlights

ಪಂಜಾಬ್ ಸರ್ಕಾರ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ದಸರಾ ಹಬ್ಬದ ದಿನದಂದು ರಾವಣ ಪ್ರತಿಕೃತಿಯ ದಹನದ ವೇಳೆ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಭಕ್ತರ ಮೇಲೆ ರೈಲು ಹರಿದ ಪರಿಣಾಮ 60ಕ್ಕೂ ಹೆಚ್ಚು ಮಂದಿ ಮೃತಪಟ್ಟು ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಕಾರ್ಯಕ್ರಮವನ್ನು ಆಯೋಜಿಸಿದ್ದು ಸಿಧು ಅವರ ಪತ್ನಿ ನವಜೋತ್ ಕೌರ್ ಆದ ಕಾರಣ ದರಂತಕ್ಕೆ ಸಿಧು ಅವರೆ ಕಾರಣ ಎಂದು ಸಾರ್ವಜನಿಕವಾಗಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದತ್ತು ಸ್ವೀಕಾರ ಹೊಣೆ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ. 

ಅಮೃತ್ ಸರ್[ಅ.23]: ರೈಲ್ವೆ ದುರಂತದಲ್ಲಿ  ತಬ್ಬಲಿಯಾದ ಮಕ್ಕಳನ್ನು ದತ್ತು ಪಡೆಯುವುದರ ಜೊತೆಗೆ ತೊಂದರೆಗೊಳಗಾದ ಕುಟುಂಬಗಳ ಜವಾಬ್ದಾರಿ ತಾವೆ ವಹಿಸುಕೊಳ್ಳುವುದಾಗಿ ಪಂಜಾಬಿನ ಸಚಿವರಾದ ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗವಿಕಲರಾದವರು, ತಂದೆತಾಯಿಗಳನ್ನು ಕಳೆದುಕೊಂಡವರ ಸಂಪೂರ್ಣ ಜವಾಬ್ದಾರಿ ಹೊತ್ತಿಕೊಂಡು ಅವರಿಗೆ ಉತ್ತಮ ಭವಿಷ್ಯ  ರೂಪಿಸುವುದಾಗಿ ಭರವಸೆ ನೀಡಿದ್ದಾರೆ. ಪಂಜಾಬ್ ಸರ್ಕಾರ ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. 

ದಸರಾ ಹಬ್ಬದ ದಿನದಂದು ರಾವಣ ಪ್ರತಿಕೃತಿಯ ದಹನದ ವೇಳೆ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಭಕ್ತರ ಮೇಲೆ ರೈಲು ಹರಿದ ಪರಿಣಾಮ 60ಕ್ಕೂ ಹೆಚ್ಚು ಮಂದಿ ಮೃತಪಟ್ಟು ನೂರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಕಾರ್ಯಕ್ರಮವನ್ನು ಆಯೋಜಿಸಿದ್ದು ಸಿಧು ಅವರ ಪತ್ನಿ ನವಜೋತ್ ಕೌರ್ ಆದ ಕಾರಣ ದರಂತಕ್ಕೆ ಸಿಧು ಅವರೆ ಕಾರಣ ಎಂದು ಸಾರ್ವಜನಿಕವಾಗಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ದತ್ತು ಸ್ವೀಕಾರ ಹೊಣೆ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ.

ರೈಲ್ವೆ ಇಲಾಖೆ ಹಾಗೂ ಪಂಜಾಬ್ ಸರ್ಕಾರದ ಅಜಾಗರೂಕತೆಯಿಂದ ದುರಂತ ಸಂಭವಿಸಿದ್ದು 4 ವಾರಗಳಲ್ಲಿ ಉತ್ತರ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿಗೊಳಿಸಿದೆ.ಸ್ಥಳೀಯ ಆಡಳಿತ ಹಾಗೂ ಕಾರ್ಯಕ್ರಮ ಆಯೋಜಕರು ಕಾರ್ಯಕ್ರಮವನ್ನು ಸರಿಯಾಗಿ ವ್ಯವಸ್ಥೆ ಮಾಡದ ಕಾರಣ ಭೀಕರ ದುರಂತ ಸಂಭವಿಸಿದ್ದು, ನಾಗರಿಕರಿಗೆ ರಕ್ಷಣೆಯ ರಕ್ಷಣೆ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ಮಾನವ ಹಕ್ಕುಗಳ ಆಯೋಗ ತರಾಟೆಗೆ ತೆಗೆದುಕೊಂಡಿದೆ. ವಕೀಲರೊಬ್ಬರು ತನಿಖೆಯನ್ನು ಸಿಬಿಐ ಅಥವಾ ವಿಶೇಷ ತನಿಖಾ ತಂಡ ವಹಿಸಬೇಕೆಂದು  ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. 

click me!