
ಬೆಂಗಳೂರು(ಎ.19): ಬಾಹುಬಲಿ - 2 ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡಲ್ಲ ಎಂದು ಕನ್ನಡ ಪರ ಹೋರಾಟಗಾರರು ಎಚ್ಚರಿಸಿದ್ದಾರೆ. ಬಿಡುಗಡೆಯಾದ್ರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ಕೂಡ ನೀಡಿದ್ದಾರೆ. ಇದರಿಂದಾಗಿ ವಿಚಲಿತವಾಗಿರುವ ನಿರ್ಮಾಪಕರು ಬಾಹುಬಲಿ ರಿಲೀಸ್ ಮಾಡಲು ಕಸರತ್ತು ನಡೆಸಿದ್ದಾರೆ. ಅವರು ಸ್ಯಾಂಡಲ್ ವುಡ್ ನ ಹಿರಿಯ ನಟರೊಬ್ಬರ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಕನ್ನಡಿಗರು ಕಟ್ಟಪ್ಪನ ದ್ವೇಷಿಸಲು ಕಾರಣ ಕಟ್ಟಪ್ಪ ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು. ಭಾಷಣ ವೇಳೆ ಕನ್ನಡಿಗರನ್ನು ಅವಹೇಳನ ಮಾಡಿದ್ದು. ಹೀಗಾಗಿ ಸತ್ಯರಾಜ್ ಕ್ಷಮೆ ಕೇಳುವವರೆಗೂ ಕರ್ನಾಟಕದಲ್ಲಿ ಬಾಹುಬಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎನ್ನುತ್ತಿದ್ದಾರೆ ಕೆಚ್ಚೆದೆಯ ಕನ್ನಡಿಗರು. ಈಗಾಗಲೇ ಕಟ್ಟಪ್ಪ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳೂ ಕೂಡ ನಡೆದಿವೆ.
ಕಟ್ಟಪ್ಪನ ಕಿರಿಕ್ ಬಾಹುಬಲಿ - 2 ನಿರ್ಮಾಪಕರಿಗೆ ತಲೆನೋವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡಲೇಬೇಕು ಎಂದು ನಿರ್ಮಾಪಕರು ವಾಮಾ ಮಾರ್ಗ ಹಿಡಿದಿದ್ದಾರೆ. ಬಾಹುಬಲಿ ನಿರ್ಮಾಪಕರಾದ ಶೋಭು ಯರ್ಲಗಡ್ಡಾ , ಪ್ರಸಾದ ದೇವಿನೇನಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಸಿನಿಮಾ ರಿಲೀಸ್ ಮಾಡಲು ಸಹಕರಿಸುವಂತೆ ಸ್ಯಾಂಡಲ್ ವುಡ್ ನ ಹಿರಿಯ ನಟರೊಬ್ಬರ ಸಹಾಯ ಕೇಳಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹಾಗಾದ್ರೆ ಯಾರು ಆ ಹಿರಿಯ ನಟ ಎಂಬುದೇ ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಕನ್ನಡ ಪ್ರೇಮ ಮರೆತು ಆ ಹಿರಿಯ ನಟ ಸಿನಿಮಾ ರಿಲೀಸ್ ಗೆ ಸಹಕರಿಸುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.
ಇದರ ಹೊರತಾಗಿಯೂ ನಿರ್ಮಾಪಕರು ಫಿಲ್ಮಂ ಚೇಂಬರ್ ಮೆಟ್ಟಿಲೂ ಏರಿದ್ದಾರೆ. ಸಿನಿಮಾ ರಿಲೀಸ್ ಗೆ ಅನುವು ಮಾಡಿಕೊಡುವಂತೆ ಅಧ್ಯಕ್ಷ ಸಾ.ರಾ ಗೋವಿಂದ್ ಅವರ ಬಳಿ ಕೇಳಿದ್ದಾರಂತೆ. ಆದರೆ ಕಟ್ಟಪ್ಪ ನಿಂದ ಕ್ಷಮೆ ಕೇಳಿಸಿ ಚಿತ್ರ ರಿಲೀಸ್ ಮಾಡಿಕೊಳ್ಳಿ ಎಂದು ಹೇಳಿ ಕಳಿಸಿದ್ದಾರಂತೆ ಸಾರಾ ಗೋವಿಂದ್. ರಾಜ್ಯದಲ್ಲಿ ಬಾಹುಬಲಿ -2 ಬಿಡುಗೆಡೆ ಆಗಲು ಬಿಡಲ್ಲ ಎಂದು ಕನ್ನಡ ಪರ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಇದರ ನಡುವೆಯೇ ಬಾಹುಬಲಿ ನಿರ್ಮಾಪಕರು ಬೇರೆ ಮಾರ್ಗದ ಮೂಲಕ ಸಿನಿಮಾ ರಿಲೀಸ್ ಗೆ ಯತ್ನಿಸುತ್ತಿದ್ದಾರೆ. ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.