ಹೆಂಡತಿಗೆ ಇಷ್ಟವಿಲ್ಲದಾಗ ಗಂಡನೊಂದಿಗೆ ಬದುಕುವಂತೆ ಒತ್ತಡ ಹೇರುವಂತಿಲ್ಲ

By Suvarna Web DeskFirst Published Apr 8, 2018, 4:32 PM IST
Highlights

ಹೆಂಡತಿ ಒಂದು ವಸ್ತುವಲ್ಲ . ಆದ್ದರಿಂದ ಆಕೆಗೆ ಇಷ್ಟವಿಲ್ಲದಿದ್ದಲ್ಲಿಯೂ ಕೂಡ ಪತಿಯೊಂದಿಗೆ ವಾಸಿಸಬೇಕು ಎಂದು ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ವಿಚಾರವನ್ನು ತಿಳಿಸಿದೆ.

ನವದೆಹಲಿ : ಹೆಂಡತಿ ಒಂದು ವಸ್ತುವಲ್ಲ . ಆದ್ದರಿಂದ ಆಕೆಗೆ ಇಷ್ಟವಿಲ್ಲದಿದ್ದಲ್ಲಿಯೂ ಕೂಡ ಪತಿಯೊಂದಿಗೆ ವಾಸಿಸಬೇಕು ಎಂದು ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ವಿಚಾರವನ್ನು ತಿಳಿಸಿದೆ.

ಗಂಡನು ಆಕೆಯೊಂದಿಗೆ ಬದುಕುವ ಇಚ್ಛೆಯನ್ನು ಹೊಂದಿದ್ದು, ಆಕೆಗೆ ಇಷ್ಟವಿಲ್ಲ ಎಂದಾದಲ್ಲಿಯೂ ಕೂಡ ಅವಳಿಗೆ ಯಾವುದೇ ರೀತಿ  ಒತ್ತಡ ಹೇರುವಂತಿಲ್ಲ ಎಂದು ಹೇಳಿದೆ.

ಪತಿಯೊಂದಿಗೆ ವಾಸಿಸಲು ತನಗೆ ಇಷ್ಟವಿಲ್ಲ. ಆತನ ಹಿಂಸೆಯನ್ನು ತಡೆಯಲಾಗದು ಎಂದು ಮಹಿಳೆಯೊಬ್ಬರು ಕೋರ್ಟ್ ಮೊರೆ ಹೋಗಿದ್ದು, ಈ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್ ಈ ವಿಚಾರವನ್ನು ತಿಳಿಸಿದೆ.

ಯಾವುದೇ ಕಾರಣಕ್ಕೂ ಕೂಡ ಪತಿಯೊಂದಿಗೆ ವಾಸ ಮಾಡಬೇಕು ಎಂದು ಆಕೆಗೆ ಒತ್ತಡ ಹೇರುವಂತಿಲ್ಲ. ಹೇಗೆ ಆಕೆಯೊಂದಿಗೆ ಬದುಕು ನಡೆಸಬೇಕು ಎಂದು ಹೇಳುತ್ತೀರಿ ಎಂದು ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ. ನ್ಯಾಯಮೂರ್ತಿ ಮದನ್ ಬಿ ಲೋಕುರ್, ದೀಪಕ್ ಗುಪ್ತಾ ಅವರಿದ್ದ ಪೀಠ ವಿಚಾರವನ್ನು ತಿಳಿಸಿದೆ.

click me!