‘ಮುಸ್ಲಿಂ’ ಪದ ಬಳಸದ ಸಿಎಂ ಬಗ್ಗೆ ಟೀಕೆ

By Suvarna Web DeskFirst Published Jul 8, 2017, 11:35 PM IST
Highlights

ನೀಡುವಾಗ ಸಿದ್ದರಾಮಯ್ಯ ಅವರು ಹಿಂದುಗಳ ಹೆಸರನ್ನು ಸರಾಗವಾಗಿ ಬಳಸುವಂತೆ ಮುಸ್ಲಿಂ ಎಂಬ ಪದವನ್ನು ಬಳಸಿಲ್ಲ. ತನ್ಮೂಲಕ ರಾಜಕೀಯ ಮಾಡಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದ್ದು, ಇದು ವೈರಲ್ ಆಗಿದೆ.

ಬೆಂಗಳೂರು(ಜು.08): ಕರಾವಳಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆ ನಂತರ ಉದ್ಭವವಾಗಿರುವ ಪರಿಸ್ಥಿತಿಯನ್ನು ಹತೋಟಿಗೆ ತರುವ ಬಗ್ಗೆ ಮಾತನಾಡುವಾಗ ಹಿಂದುಗಳ ಮೇಲೆ ಕ್ರಮದ ವಿಚಾರವನ್ನು ಸರಾಗವಾಗಿ ಬಳಸಿ, ಮುಸ್ಲಿಂ ಪದವನ್ನು ಬಳಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ.

ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಹತ್ಯೆ ಘಟನೆ ಹಿನ್ನೆಲೆಯಲ್ಲಿ ಮಂಗಳೂರು, ಬಂಟ್ವಾಳದಲ್ಲಿ ಕಲ್ಲು ತೂರಾಟ, ಪ್ರತಿಭಟನೆ ನಡೆದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು. ಈ ವೇಳೆ ಅವರು ‘ಸಮಾಜದ ಸ್ವಾಸ್ಥ್ಯ ಕದಡುವವರು ಹಿಂದುಗಳಾಗಲಿ... (ಕೆಲವು ಸೆಕೆಂಡ್ ಮೌನದ ನಂತರ) ಬೇರೆ ಯಾವುದೇ ಜಾತಿ ಧರ್ಮದವರಾಗಿರಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ಈ ಹೇಳಿಕೆ ನೀಡುವಾಗ ಸಿದ್ದರಾಮಯ್ಯ ಅವರು ಹಿಂದುಗಳ ಹೆಸರನ್ನು ಸರಾಗವಾಗಿ ಬಳಸುವಂತೆ ಮುಸ್ಲಿಂ ಎಂಬ ಪದವನ್ನು ಬಳಸಿಲ್ಲ. ತನ್ಮೂಲಕ ರಾಜಕೀಯ ಮಾಡಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದ್ದು, ಇದು ವೈರಲ್ ಆಗಿದೆ.

click me!