ಬಂಧಿಸಿದ್ದು ಗೌರಿ ಲಂಕೇಶ್ ಹತ್ಯೆ ವಿಚಾರಣೆಗೆ: ಬಾಯಿಬಿಟ್ಟಿದ್ದು ರವಿ ಬೆಳಗೆರೆ ಸುಪಾರಿ ವಿಚಾರ

Published : Dec 08, 2017, 02:44 PM ISTUpdated : Apr 11, 2018, 12:36 PM IST
ಬಂಧಿಸಿದ್ದು ಗೌರಿ ಲಂಕೇಶ್ ಹತ್ಯೆ ವಿಚಾರಣೆಗೆ: ಬಾಯಿಬಿಟ್ಟಿದ್ದು ರವಿ ಬೆಳಗೆರೆ ಸುಪಾರಿ ವಿಚಾರ

ಸಾರಾಂಶ

ತನ್ನ 2ನೇ ಹೆಂಡತಿಯನ್ನು ಸುನೀಲ್ ಹೆಗ್ಗರವಳ್ಳಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದು, ಆತನನ್ನು ಕೊಲೆ ಮಾಡಬೇಕೆಂದು ರವಿ ಬೆಳಗೆರೆ ಅವರು ಹಣ ಕೊಟ್ಟಿದ್ದರು ಕೊಲೆಯ ಕಾರಣವನ್ನು ತಿಳಿಸಿದ್ದಾನೆ.

ಬೆಂಗಳೂರು(ಡಿ.08): ಸಿಸಿಬಿ ಪೊಲೀಸರು ವಿಜಯಪುರದ ಚಡಚಣದ  ಶಾರ್ಪ್ ಶೂಟರ್ ಶಶಿ ಮುಂಡೇವಾಡಗಿಯನ್ನು ಬಂಧಿಸಿದ್ದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರವಾಗಿ ಆದರೆ ಆತ ಬಾಯ್ಬಿಟ್ಟಿದ್ದು ಸ್ಫೋಟಕ ಸುದ್ದಿ.

ಪೊಲೀಸರು ವಿಚಾರಣೆ ನಡೆಸಿದಾಗ ನಾನು ಬೆಂಗಳೂರಿಗೆ ಬಂದಿದ್ದು ಗೌರಿ ಲಂಕೆಶರನ್ನು ಹತ್ಯೆ ಮಾಡಲು ಅಲ್ಲ. ಹಾಯ್ ಬೆಂಗಳೂರು ವಾರಪತ್ರಿಕೆ ಸಂಪಾದಕ  ರವಿ ಬೆಳಗೆರೆ ಅವರು ತಮ್ಮ ಮಾಜಿ ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿಯನ್ನು ಕೊಲ್ಲಲು ನನಗೆ 30 ಲಕ್ಷ ರೂ. ಸುಪಾರಿ ಕೊಟ್ಟಿದ್ದರು. ಆ ಕಾರಣದಿಂದ ಹೆಗ್ಗರವಳ್ಳಿಯನ್ನು ಕೊಲ್ಲಲು ಬಂದಿದ್ದೆ ಎಂದು ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ.

ಸುನೀಲ್ ಹೆಗ್ಗರವಳ್ಳಿಯನ್ನು ಕೊಲೆ ಮಾಡಬೇಕೆಂದು ರವಿ ಬೆಳಗೆರೆ ಅವರು ಹಣ ಕೊಟ್ಟಿದ್ದರು ಎಂದು ಕೊಲೆಯ ಕಾರಣವನ್ನು ತಿಳಿಸಿದ್ದಾನೆ. ಸುನೀಲ್ ಹೆಗ್ಗರವಳ್ಳಿ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸುಮಾರು 17 ವರ್ಷಗಳ ಕಾಲ ಕ್ರೈಂ ವರದಿಗಾರರಾಗಿ ಕೆಲಸ ಮಾಡಿದ್ದರು. ಸದ್ಯ ರವಿ ಬೆಳಗೆರೆಯನ್ನು ಪದ್ಮನಾಭ ನಗರ ಮನೆಯಿಂದ ಬಂಧಿಸಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ