ಕಳೆದ 11 ತಿಂಗಳಲ್ಲಿ ಒಮ್ಮೆಯೂ ಮೋದಿಯನ್ನು ನೆನೆಪಿಸಿಕೊಳ್ಳದ ಕೇಜ್ರಿವಾಲ್; ಕಾರಣವೇನು ಗೊತ್ತಾ?

By Suvarna Web DeskFirst Published Feb 14, 2018, 5:10 PM IST
Highlights

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಇಂದಿಗೆ ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಅಚ್ಚರಿಗೆ ಎಂದರೆ ಸದಾ ಟ್ವಿಟರ್’ನಲ್ಲಿ ಸಕ್ರಿಯವಾಗಿರುವ ಅರವಿಂದ್ ಕೇಜ್ರಿವಾಲ್ ಕೆಲ ದಿನಗಳಿಂದ ಮೌನ ವಹಿಸಿದ್ದಾರೆ. 

ನವದೆಹಲಿ (ಫೆ.14): ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಇಂದಿಗೆ ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಅಚ್ಚರಿಗೆ ಎಂದರೆ ಸದಾ ಟ್ವಿಟರ್’ನಲ್ಲಿ ಸಕ್ರಿಯವಾಗಿರುವ ಅರವಿಂದ್ ಕೇಜ್ರಿವಾಲ್ ಕೆಲ ದಿನಗಳಿಂದ ಮೌನ ವಹಿಸಿದ್ದಾರೆ. 
ಅರವಿಂದ್ ಕೇಜ್ರಿವಾಲ್ ಟ್ವಿಟರ್’ನಲ್ಲಿ ಸದಾ ಸಕ್ರಿಯವಾಗಿದ್ದಾರೆ. 13 ಮಿಲಿಯನ್ ಫಾಲೋವರ್ಸನ್ನು ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಟ್ವೀಟ್ ವಾರ್ ನಡೆಸುತ್ತಿದ್ದ ಕೇಜ್ರಿವಾಲ್ ಕಳೆದ 11 ತಿಂಗಳಲ್ಲಿ ಒಂದು ಬಾರಿಯೂ ಮೋದಿ ಎನ್ನುವ ಪದವನ್ನು ಬಳಸಿಲ್ಲ. 2017. ಮಾರ್ಚ್ ರಂದು ಮಾಡಿದ ಟ್ವೀಟ್’ನಲ್ಲಿ ಕೊನೆಯ ಬಾರಿ ’ಮೋದಿ’ ಎನ್ನುವ ಪದವನ್ನು ಬಳಸಿದ್ದರು.  
ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಸರ್ವಾಧಿಕಾರಿ ಸರ್ಕಾರ, ಸೇನಾ ವಿರೋಧಿ ಸರ್ಕಾರ ಎಂದು ಟ್ವೀಟ್ ಮಾಡಿದ್ದರು. ಇದು ಮೋದಿ ಅಭಿಮಾನಿಗಳನ್ನು ಕೆರಳಿಸಿತ್ತು. ಪಂಜಾಬ್, ಗೋವಾ ಚುನಾವಣೆಯಲ್ಲಿ ಆಪ್ ಸೋಲಲು ಇದು ಒಂದು ಕಾರಣ ಎನ್ನಲಾಗಿದೆ. ಹಾಗಾಗಿ ಕೇಜ್ರಿವಾಲ್ ಮೌನಕ್ಕೆ ಜಾರಿದ್ದಾರೆ ಎಂದು ಪಕ್ಷದ ನಾಯಕರು, ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

click me!