
ವಾಷಿಂಗ್ಟ'ನ್(ಫೆ.14): ಅಮೆರಿಕಾದಲ್ಲಿ ತಯಾರಾಗುತ್ತಿರುವ ಮೋಟರ್ ಸೈಕಲ್'ಗಳಿಗೆ ಭಾರತವೂ ಸೇರಿದಂತೆ ವಿವಿಧ ದೇಶಗಳಲ್ಲಿ ಅತ್ಯಧಿಕ ಸುಂಕ ವಿಧಿಸುತ್ತಿರುವುದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿ ಕಾರಿದ್ದಾರೆ.
ಕಾಂಗ್ರೆಸ್'ನ ಸದಸ್ಯರೊಂದಿಗೆ ಸಭೆಯಲ್ಲಿ ಮಾತನಾಡಿದ ಅವರು, ಭಾರತವೂ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ನಮ್ಮ ದೇಶದಲ್ಲಿ ತಯಾರಾಗುವ ಹಾರ್ಲಿ ಡೇವಿಡ್'ಸನ್ ಒಳಗೊಂಡು ಹಲವು ಮೋಟಾರ್ ಸೈಕಲ್'ಗಳಿಗೆ ಅತ್ಯಧಿಕ ಸುಂಕ ವಿಧಿಸಲಾಗುತ್ತಿದೆ. ಇದು ಅತ್ಯಂತ ಖಂಡನೀಯ. ನಮ್ಮ ಉತ್ಪನ್ನಗಳನ್ನು ಕೊಳ್ಳಬಯಸುವ ಬೇರೆ ದೇಶಗಳೆ ನಮಗೆ ಸುಂಕ ವಿಧಿಸುತ್ತಿವೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೊದಿ ಅವರಿಗೆ ಕಳೆದ ವಾರ ಕರೆ ಮಾಡಿ ಮಾತನಾಡಿದಾಗ ಮೋಟರ್'ಸೈಕಲ್'ಗಳಿಗೆ ವಿಧಿಸಲಾಗುತ್ತಿರುವ ಸುಂಕವನ್ನು ಶೇ.75ರಿಂದ 50ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು. ಆದರೆ ನಾವು ಇದನ್ನು ಶೂನ್ಯಕ್ಕೆ ಇಳಿಸಬೇಕೆಂದು ಬಯಸುತ್ತೇವೆ. ಏಕೆಂದರೆ ಬೇರೆ ದೇಶಗಳ ಮೋಟರ್ ಸೈಕಲ್'ಗಳಿಗೆ ನಾವು ವಿಧಿಸುವ ತೆರಿಗೆ ಕೇವಲ ಶೂನ್ಯ ಎಂದು'. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾವು ಕೂಡ ತೆರಿಗೆ ಹೇರಬೇಕಾಗುತ್ತದೆ ಎಂದು ತಿಳಿಸಿದರು.
ಶ್ರೀಮಂತರು ಬಳಸುವ ಹಾರ್ಲಿ ಡೇವಿಡ್'ಸನ್ ಮೋಟರ್ ಸೈಕಲ್ ಬೆಲೆ ಭಾರತದಲ್ಲಿ 5 ಲಕ್ಷ ರೂ.ಗಳಿಂದ 55 ಲಕ್ಷ ರೂ.ಗಳವರೆಗೂ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.