
ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಮೈತ್ರಿ ಸರ್ಕಾರದಲ್ಲಿ ತನಗೆ ಲಭಿಸುವ ಒಂದು ಸ್ಥಾನಕ್ಕಾಗಿ ಜೆಡಿಎಸ್ ಪಕ್ಷದಲ್ಲಿ ಐದಕ್ಕೂ ಹೆಚ್ಚು ಅಭ್ಯರ್ಥಿಗಳು ರೇಸ್‌ನಲ್ಲಿದ್ದು, ‘ದಳ’ಪತಿಗಳ ಆಶೀರ್ವಾದ ಯಾರಿಗೆ ಲಭಿಸಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಜಾತಿ, ಪ್ರಭಾವ ಪ್ರಾಬಲ್ಯದ ಮೇಲೆ ಅಭ್ಯ ರ್ಥಿಗಳಿಗೆ ಟಿಕೆಟ್ ದೊರಕಲಿದೆ. ಜೆಡಿಎಸ್ ವರಿಷ್ಠರು ತಮ್ಮ ‘ಮಾನದಂಡ’ಗಳಿ ಗನುಸಾರವಾಗಿ ಟಿಕೆಟ್ ಹಂಚಿಕೆ ಮಾಡಲಿದ್ದಾರೆ. ಜೆಡಿಎಸ್ ವರಿಷ್ಠ ಎಚ್ .ಡಿ.ದೇವೇಗೌಡ ನೇತೃತ್ವದಲ್ಲಿ ಗುರುವಾರ ಸಭೆ ನಡೆಯಲಿದ್ದು, ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಪಕ್ಷದ ಮುಖಂಡ ಅಮರನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಮಾಜಿ ಶಾಸಕರಾದ ಎನ್.ಎಚ್. ಕೋನರೆಡ್ಡಿ, ಮಧು ಬಂಗಾರಪ್ಪ, ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಇತರರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಪೈಕಿ ಅಮರನಾಥ್ ಮತ್ತು ರಮೇಶ್ ಬಾಬು ಹೆಸರು ಮುಂಚೂಣಿಯಲ್ಲಿದ್ದು, ಈ ಪೈಕಿ ಒಬ್ಬರನ್ನು ಜೆಡಿಎಸ್ ವರಿಷ್ಠರು ಅಂತಿಮಗೊಳಿಸುವ ಸಾಧ್ಯತೆ ಎಂದು ಮೂಲಗಳು ಹೇಳಿವೆ. ವಿಧಾನಪರಿಷತ್‌ನ ಖಾಲಿ ಇರುವ ಮೂರು ಸ್ಥಾನಗಳಿಗೆ ವಿಧಾನಸಭೆಯ ಸದಸ್ಯರು ಮೂವರು ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ.
ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸೆ.22 ರಂದು ನಾಮಪತ್ರಕ್ಕೆ ಕೊನೆಯ ದಿನವಾಗಿದೆ. ಸೆ.26 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಸಭೆ ಸೇರಿ ಅಂತಿಮಗೊಳಿಸುವ ಸಾಧ್ಯತೆ ಇದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಸಚಿವ ಎಚ್.ಡಿ.ರೇವಣ್ಣ ಸೇ ಇತರೆ ಪ್ರಮುಖರು ಸಭೆ ನಡೆಸಿ ಚರ್ಚಿಸಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದ್ದಾರೆ. ರಮೇಶ್ ಬಾಬು ಅವರು ಈಗಾಗಲೇ ಪರಿಷತ್ ಸದಸ್ಯರಾಗಿದ್ದು, ಸಮರ್ಥರಿದ್ದಾರೆ.
ಈ ಹಿಂದೆ ಸದನದೊಳಗೆ ಮತ್ತು ಹೊರಗೆ ಪಕ್ಷವನ್ನು ಸಮರ್ಥಿಸಿದ್ದಾರೆ. ಹೀಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ರಮೇಶ್ ಬಾಬು ಪರ ಒಲವು ವ್ಯಕ್ತಪಡಿ ಸಿದ್ದಾರೆ. ಆದರೆ, ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಅಮರನಾಥ್ ಪರ ಒಲವಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.