
ನವದೆಹಲಿ(ಸೆ.16): ಸೇನಾ ಜವಾನರೊಬ್ಬರಿಗೆ ಮಹಿಳೆಯೊಬ್ಬಳು ವಿನಾಕಾರಣ ಥಳಿಸಿದ ಘಟನೆ ದೆಹಲಿಯಲ್ಲಿ ನಡೆದಿದ್ದು, ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳೆದ ಶನಿವಾರ ಈ ಘಟನೆ ನಡೆದಿತ್ತು ಎನ್ನಲಾಗಿದ್ದು, ಮಹಿಳೆಯನ್ನು ಇದೀಗ ಬಂಧಿಸಲಾಗಿದೆ. ಥಳಿತಕ್ಕೊಳಗಾಗಿರುವ ಯೋಧ ಜೆಸಿಒ ಮಹಾವೀರ ಸಿಂಗ್ ಎಂದು ಗುರುತಿಸಲಾಗಿದೆ.
ನಿಜಾಮುದ್ದೀನ್ ರೈಲ್ವೆ ನಿಲ್ದಾಣ ಮಾರ್ಗದಲ್ಲಿ, ಸೇನಾ ವಾಹನದಲ್ಲಿ ಸಿಂಗ್ ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆ ಅವರ ಮುಂದೆ ಯದ್ವಾತದ್ವಾ ಕಾರು ಚಲಾಯಿಸಿದ್ದಳು. ಬಳಿಕ ಒಮ್ಮೆಗೇ ಕಾರು ನಿಲ್ಲಿಸಿದ ಮಹಿಳೆ ಕಾರಿನಿಂದಿಳಿದು, ಸೇನಾ ವಾಹನದ ಚಾಲಕನಿಗೆ ಮೊದಲು ಥಳಿಸಿದ್ದಳು. ಬಳಿಕ ಸಿಂಗ್ ಬಳಿ ತೆರಳಿ ಏನೊಂದೂ ಮಾತನಾಡುವುದಕ್ಕೆ ಅವಕಾಶ ನೀಡದೆ, ಹೊಡೆದಳು ಎನ್ನಲಾಗಿದೆ. ಆಕೆ ಮಹಿಳೆ ಎಂಬ ಕಾರಣಕ್ಕಾಗಿ ತಾನು ತಿರುಗಿ ಹೊಡೆದಿಲ್ಲ ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.