
ಮೈಸೂರು : ಲೋಕೋಪಯೋಗಿ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಅವರ ಪುತ್ರ ಸುನಿಲ್ ಬೋಸ್ ಅವರು ಇಬ್ಬರೂ ಆಕಾಂಕ್ಷಿಗಳು. ಹೌದು. ಖುದ್ದು ಸುನೀಲ್ ಬೋಸ್ ಹಾಗೂ ಮಹದೇವಪ್ಪ ಅವರೇ ಈ ವಿಷಯವನ್ನು ತಿಳಿಸಿದ್ದಾರೆ.
ನಗರದಲ್ಲಿ ತಂದೆಯ ಸಂಗಡವೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನಿಲ್ ಬೋಸ್, ‘ಟಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ನನ್ನ ಹಾಗೂ ತಂದೆಯ ಹೆಸರು ಹೈಕಮಾಂಡ್‌ಗೆ ಹೋಗಿದೆ. ಆದರೆ, ಅಂತಿಮವಾಗಿ ಒಬ್ಬರು ಮಾತ್ರವೇ ನಿಲ್ಲುವ ಸಂದರ್ಭ ಎದುರಾದರೆ, ತಂದೆಯವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡುತ್ತೇನೆ. ಒಂದೊಮ್ಮೆ ತಂದೆ ಚುನಾವಣೆಗೆ ನಿಲ್ಲದಿದ್ದರೇ ನಾನು ಚುನಾವಣೆಗೆ ನಿಲ್ಲುವೆ’ ಎಂದು ಸ್ಪಷ್ಟಪಡಿಸಿದರು.
ಸಚಿವ ಮಹದೇವಪ್ಪ ಮಾತನಾಡಿ, ‘ಟಿ.ನರಸೀಪುರದಿಂದ ತಾನು ಹಾಗೂ ತನ್ನ ಪುತ್ರರಿಬ್ಬರೂ ಟಿಕೆಟ್ ಆಕಾಂಕ್ಷಿಗಳಾಗಿದ್ದು ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ತಿಳಿಸಿದರು.
ಇದೇವೇಳೆ ಅವರು ಸಿ.ವಿ.ರಾಮನ್ ನಗರದಿಂದ ಕಣಕ್ಕಿಳಿಯುತ್ತಾರೆಂಬ ಊಹಾಪೋಹಗಳಿಗೆ ಅವರು ತೆರ ಎಳೆದರು. ಮೈಸೂರಿನೊಂದಿಗೆ ತಮಗೆ ಅವಿನಾಭಾವ ಸಂಬಂಧವಿದ್ದು, ಟಿ.ನರಸೀಪುರ ಹಾಗೂ ನಂಜನಗೂಡಿನ ಜನ ಸೋತಾಗಲೂ ಕಾರು ಕೊಟ್ಟು ಓಡಾಡಿಸಿದ್ದಾರೆ. ಇಂತಹ ಜನರನ್ನು ಬಿಟ್ಟು ಬೇರೊಂದು ಕ್ಷೇತ್ರಕ್ಕೆ ಹೋಗಲು ಮನಸ್ಸಿಲ್ಲ ಎಂದರು.
ಈ ಬಾರಿಯ ವಿಧಾನಸಭಾ ಚುನಾವಣೆಯು ಕರ್ನಾಟಕ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಪ್ರಮುಖ ಚುನಾವಣೆಯಾಗಿದೆ. ಹೀಗಾಗಿ, ನನಗೆ ಅಧಿಕಾರದ ರಾಜಕಾರಣಕ್ಕಿಂತ, ಕೋಮುವಾದಿ ಶಕ್ತಿಗಳನ್ನು ಮಣಿಸುವ ರಾಜಕಾರಣ ಮಾಡಬೇಕೆನಿಸಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.