
ಬೆಂಗಳೂರು(ಅ. 26): ಹುಣಸಮಾರನಹಳ್ಳಿಯ ವೀರಶೈವ ಮಠದ ಸ್ವಾಮಿಗಳ ರಾಸಲೀಲೆ ಪ್ರಕರಣ ಈಗ ಜೋರು ಸದ್ದು ಮಾಡುತ್ತಿದೆ. ಚಿತ್ರನಟಿಯೊಬ್ಬಳೊಂದಿಗೆ ಸ್ವಾಮೀಜಿ ಹಾಸಿಗೆಯಲ್ಲಿ ಚೇಷ್ಟೆ ನಡೆಸುತ್ತಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಸ್ವಾಮಿ ಜೊತೆ ಕಾಮದಾಟ ನಡೆಸುತ್ತಿದ್ದ ಆ ಚಿತ್ರ ನಟಿ ಯಾರು? ಮಹಿಳೆ ಎಂಬ ದೃಷ್ಟಿಯಿಂದ ಆಕೆಯ ಹೆಸರನ್ನು ಬಹಿರಂಗಪಡಿಸುತ್ತಿಲ್ಲ.
ಶಿವಮೊಗ್ಗದ ತೀರ್ಥಹಳ್ಳಿಯಳಾದ ಈ ನಟಿ ಕೆಲವಾರು ಚಿತ್ರಗಳಲ್ಲಿ ನಟಿಸಿದ್ದಾಳೆ. ಬಾವಾಜಿ ಪ್ರೊಡಕ್ಷನ್ಸ್'ನ "141" ಎಂಬ ಬಿ ಗ್ರೇಡ್ ಸಿನಿಮಾದಲ್ಲಿ ಈಕೆಯೇ ನಾಯಕಿ. ಅದರಲ್ಲಿ ಸಲಿಂಗ ರತಿಯ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಿದ್ದಾಳೆ. "ಸಂತೋಷಕೆ" ಎಂಬ ಚಿತ್ರದ ಆರು ನಾಯಕಿಯರಲ್ಲಿ ಈಕೆಯೂ ಒಬ್ಬಳು. ತುಳು ಭಾಷೆಯ "ಡ್ಯಾನ್ಸ್ ಕುಡ್ಲ ಡ್ಯಾನ್ಸ್" ಸಿನಿಮಾದಲ್ಲೂ ಈಕೆ ನಾಯಕಿ.
ಚಿತ್ರದುರ್ಗದ ಸಂಬಂಧಿಯೊಬ್ಬರ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಈ ಹುಡುಗಿಯ ಮೊದಲ ಚಿತ್ರ "ಖತರ್ನಾಕ್". ಇದರಲ್ಲಿ ರೂಪಿಕಾ ಜೊತೆ ನಟಿಸಿರುತ್ತಾಳೆ. ಆ ಬಳಿಕ ಕೆಲ ಚಿತ್ರಗಳಲ್ಲಿ ನಟಿಸಿದ್ದಾಳೆ. ಶುಭಾ ಪೂಜಾ ಜೊತೆ ಸ್ನೇಹಿತೆಯಾಗಿ ನಟಿಸಿದ "ಅದೃಷ್ಟ' ಚಿತ್ರವು ಈಕೆಯ ದುರದೃಷ್ಟಕ್ಕೆ ಬಿಡುಗಡೆಯೇ ಆಗಿಲ್ಲ.
ಆದರೆ, ನಿಜಜೀವನದಲ್ಲಿ ಹುಣಸಮಾರನಹಳ್ಳಿ ಮಠದ ಜೊತೆ ಈಕೆಯ ಪಲ್ಲಂಗದಾಟದ ವಿಡಿಯೋ ಮಾತ್ರ ಮಾಧ್ಯಮಗಳಲ್ಲಿ ಬಿಡುಗಡೆಯಾಗಿ ಹಿಟ್ ಆಗಿದೆ. ಈ ವಿಡಿಯೋದ 'ಹೀರೋ' ದಯಾನಂದ ಸ್ವಾಮಿ ಜೈಲು ಸೇರುವ ಭೀತಿಯಲ್ಲಿದ್ಧಾನೆ. ಮಠದ ಆಸ್ತಿಯಲ್ಲಿ ಪಾಲು ಕೊಡುತ್ತೇನೆಂದು ಆಮಿಷವೊಡ್ಡಿ ಗುರುನಂಜೇಶ್ವರ ಶಿವಾಚಾರ್ಯ ಅಕಾ ದಯಾನಂದ ಸ್ವಾಮಿಯವರು ಈ ನಟಿಯೊಂದಿಗೆ ರಾಸಲೀಲೆ ನಡೆಸಿದ್ದಾರೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.