ಅಪರೂಪದ ಬಿಳಿ ಗೂಬೆ ಚಿಕ್ಕಮಗಳೂರಿನಲ್ಲಿ ಪತ್ತೆ

By Suvarna Web DeskFirst Published Sep 16, 2017, 9:40 PM IST
Highlights

ಕಾಫಿ ಅಂಗಡಿಯಲ್ಲಿ ಕಾಫಿ ಮಿಷನ್ ಗೆ ಸಿಕ್ಕಿ  ಹಾಕಿಕೊಂಡಿದ್ದ ಗೊಬೆಯನ್ನು ಸ್ಥಳೀಯ ಉರಗ ತಜ್ಞ ನರೇಶ ಅವರು ರಕ್ಷಿಸಿದ್ದಾರೆ.

ಚಿಕ್ಕಮಗಳೂರಲ್ಲಿ ಅಪರೂಪದ ಬಿಳಿ ಗೂಬೆ ಪತ್ತೆಯಾಗಿದೆ. ನಗರದ ಎಂ.ಜೆ. ರಸ್ತೆಯಲ್ಲಿರುವ ಪಾಡುರಂಗ ಕಾಫಿ ಅಂಗಡಿಯಲ್ಲಿ ಕಾಫಿ ಮಿಷನ್ ಗೆ ಸಿಕ್ಕಿ  ಹಾಕಿಕೊಂಡಿದ್ದ ಗೊಬೆಯನ್ನು ಸ್ಥಳೀಯ ಉರಗ ತಜ್ಞ ನರೇಶ ಅವರು ರಕ್ಷಿಸಿದ್ದಾರೆ. ಅಂಗಡಿಗೆ ಬಿಳಿ ಗೂಬೆ ನೋಡಲು ಜನ ಜಮಾಯಿಸಿದ್ದಾರೆ. ಬಿಳಿ ಗೂಬೆ ರಾತ್ರಿ ಬಂದಿರಬೇಕು ಎಂದು ಹೇಳಲಾಗುತ್ತಿದೆ. ಅವನತಿ ಅಂಚಿನಲ್ಲಿರುವ ಬಿಳಿ ಗೂಬೆ ಸಿಗುವುದೆ ಅಪರೂಪವಾಗಿದೆ.

click me!