ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಈ ಬಾಲಕನಿಗೆ ನೆರವು ನೀಡಿದ್ದು ಯಾರು ಗೊತ್ತೆ?

Published : Jan 07, 2017, 10:04 AM ISTUpdated : Apr 11, 2018, 01:12 PM IST
ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಈ ಬಾಲಕನಿಗೆ ನೆರವು ನೀಡಿದ್ದು ಯಾರು ಗೊತ್ತೆ?

ಸಾರಾಂಶ

ಅಪರೂಪದಲ್ಲಿ ಅಪರೂಪ ಎಂಬಂತೆ ಈ ಹುಡುಗ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಈತನ ಪೋಷಕರು ಆಸ್ತಿ, ಒಡವೆ, ಸೇವಿಂಗ್ಸ್ ಎಲ್ಲವನ್ನು ಖರ್ಚು ಮಾಡಿದ್ದರು. ಎಲ್ಲವೂ ಖಾಲಿಯಾಗಿ ಬರಿಗೈಯಾದಾಗ ಭರವಸೆಯನ್ನೇ  ಕಳೆದುಕೊಂಡರು.

ನವದೆಹಲಿ (ಜ.07): ಅಪರೂಪದಲ್ಲಿ ಅಪರೂಪ ಎಂಬಂತೆ ಈ ಹುಡುಗ ಮೆದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಈತನ ಪೋಷಕರು ಆಸ್ತಿ, ಒಡವೆ, ಸೇವಿಂಗ್ಸ್ ಎಲ್ಲವನ್ನು ಖರ್ಚು ಮಾಡಿದ್ದರು. ಎಲ್ಲವೂ ಖಾಲಿಯಾಗಿ ಬರಿಗೈಯಾದಾಗ ಭರವಸೆಯನ್ನೇ  ಕಳೆದುಕೊಂಡರು. ಕೊನೆಗೆ ಈತನ ತಂದೆ ಸಹಾಯ ಕೋರಿ ಪ್ರಧಾನಿಯವರಿಗೇಕೆ ಪತ್ರ ಬರೆಯಬಾರದೆಂದು ಎಂದು ಯೋಚಿಸಿ ಬರದೇ ಬಿಟ್ಟರು. ಆಶ್ಚರ್ಯ ಎಂಬತೆ ಪ್ರಧಾನಿ ಸಚಿವಾಲಯದಿಂದ ಉತ್ತರವೂ ಬಂತು.

ಗುಜರಾತ್ ನ ಅಮ್ರೇಲಿ ಜಿಲ್ಲೆಯ ಪಾರ್ಥ ಎಂಬ ಯುವಕ ಸಬಾಕ್ಯೂಟ್ ಸಲೆರೋಸಿಂಗ್ ಪಾನೆನ್ಸೆಫಾಲಿಟ್ಸ್ ಎನ್ನುವ ಮಿದುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. “ ಕಳೆದ 4 ತಿಂಗಳಿಂದ ಮಗನಿಗೆ ಡಯಾಗ್ನಿಸಿಸ್ ಮಾಡಿಸುತ್ತಿದ್ದೇನೆ. ತಜ್ಞ ವೈದ್ಯರನ್ನು ಭೇಟಿ ಮಾಡಿದ್ದೇನೆ. ಆದರೆ ಅವರ ಸ್ಥಿತಿಯಲ್ಲಿ ಚೇತರಿಕೆ ಕಂಡು ಬಂದಿಲ್ಲ. ಮಗನಿಗೋಸ್ಕರ ಆಸ್ತಿಯನ್ನು ಮಾರಿದೆ. ಹೆಂಡತಿಯ ಒಡವೆಗಳನ್ನೆಲ್ಲಾ ಮಾರಿದೆ. ಕೊನೆಗೆ ಬೇರೆ ದಾರಿಯಿಲ್ಲದೇ ಸಹಾಯಕೋರಿ ಪ್ರಧಾನಿಯವರಿಗೆ ಪತ್ರ ಬರೆದೆ" ಎಂದು ಆತನ ತಂದೆ ಕಣ್ಣೀರಿಟ್ಟರು.

ಕೆಲವು ದಿನಗಳ ಬಳಿಕ ಪ್ರಧಾನಿ ಸಚಿವಾಲಯದಿಂದ ಪ್ರತಿಕ್ರಿಯೆ ಬಂತು. ಏಮ್ಸ್ ನಲ್ಲಿ ಉಚಿತವಾಗಿ ಸಂಪೂರ್ಣ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು. ಈಗ ಪಾರ್ಥ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಧಾನಿಯವರು ಕೇವಲ ಆರ್ಥಿಕ ಸಹಾಯ ಮಾತ್ರವಲ್ಲ ನೈತಿಕವಾಗಿಯೂ ಬೆಂಬಲ ನೀಡಿದರು ಎಂದು ಬಾಲಕನ ತಂದೆ ಗದ್ಗದಿತರಾದರು.

ದುರಾದೃಷ್ಟವಶಾತ್ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ