ಬೆಂಗಳೂರು ಸನ್ನಿವೇಶ ಇರಿಸಿಕೊಂಡು ದೀದಿ ಕಾಲೆಳೆದರಾ ಮೋದಿ..?

First Published May 26, 2018, 12:20 PM IST
Highlights

ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭ ದಿನ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ವಲ್ಪದೂರ ನಡೆದುಕೊಂಡು ಬಂದಿದ್ದರು. ಅದು ಬ್ಯಾನರ್ಜಿಗೆ ಕೋಪ ತರಿಸಿದ್ದು, ಕರ್ನಾಟಕ ಡಿಜಿಪಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು ಎನ್ನಲಾಗಿತ್ತು.

ಕೋಲ್ಕತಾ: ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭ ದಿನ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಆಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸ್ವಲ್ಪದೂರ ನಡೆದುಕೊಂಡು ಬಂದಿದ್ದರು. ಅದು ಬ್ಯಾನರ್ಜಿಗೆ ಕೋಪ ತರಿಸಿದ್ದು, ಕರ್ನಾಟಕ ಡಿಜಿಪಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು ಎನ್ನಲಾಗಿತ್ತು.

ಇದೇ ಸನ್ನಿವೇಶವನ್ನಿಟ್ಟುಕೊಂಡು, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರ ಬಂಗಾಳ ಭೇಟಿಯ ವೇಳೆ, ಹೆಲಿಪ್ಯಾಡ್‌ನಲ್ಲಿ ಮಮತಾ ಬ್ಯಾನರ್ಜಿ ಅವರ ಕಾಲೆಳೆದಿದ್ದಾರೆ ಎನ್ನಲಾದ ವೀಡಿಯೊ ಒಂದು ವೈರಲ್ ಆಗಿದೆ. ಮೋದಿಗೆ ಸಾಂಪ್ರದಾಯಿಕ ಸ್ವಾಗತ ನೀಡಲು ಬ್ಯಾನರ್ಜಿ ಹೆಲಿಪ್ಯಾಡ್‌ಗೆ ಆಗಮಿಸಿದ್ದರು. ಬ್ಯಾನರ್ಜಿ ಹೂಗುಚ್ಛ ನೀಡಿ ಪ್ರಧಾನಿಗೆ ಸ್ವಾಗತ ಕೋರುತ್ತಾರೆ. 

ಈ ವೇಳೆ ಮೋದಿಯವರ  ಕೈಸನ್ನೆಯ ಹಾವಭಾವ ಬೆಂಗಳೂರಿನ ಘಟನೆಗೆ ಸಂಬಂಧಿಸಿ, ಅವರು ಬ್ಯಾನರ್ಜಿಯ ಕಾಲೆಳೆದಂತಿದೆ ಎಂದು ಅರ್ಥೈಸಲಾಗಿದೆ. ಮೋದಿ ಏನು ಹೇಳಿದ್ದರು ಎಂಬ ಆಡಿಯೊ ಇಲ್ಲ. ಆದರೆ, ಬ್ಯಾನರ್ಜಿ ನಡೆದುಕೊಂಡು ಬಂದುದನ್ನು ಕೈಸನ್ನೆಯಲ್ಲಿ ತೋರಿಸಿದಂತಿರುವ ಪ್ರಧಾನಿಯ ಹಾವಭಾವ, ಅಷ್ಟು ದೂರದಿಂದ ನಡೆದುಕೊಂಡು ಬಂದು ಕಾಲು ನೋವಾಯಿತೇ? ಎಂದು ಕೇಳಿದಂತಿದೆ ಎಂದು ವ್ಯಂಗ್ಯವಾಡಲಾಗಿದೆ.

 

PM Narendra Modi arrives in Shanti Niketan to attend the convocation of Visva Bharati University, received by West Bengal CM Mamata Banerjee pic.twitter.com/dnDE1pZmyf

— ANI (@ANI)
click me!