
ನವದೆಹಲಿ(ಜು.12): ಸಾರ್ವಜನಿಕರು ಡಿಜಿಟಲ್ ವ್ಯವಹಾರವನ್ನು ಬ್ಯಾಂಕಿಂಗ್ ಅಥವಾ ಪೇಟಿಎಂ ಆ್ಯಪ್'ಗಳ ಮೂಲಕ ಮಾತ್ರವಲ್ಲದೆ ದಿನನಿತ್ಯ ಸುದ್ದಿಮೂಲಕ್ಕೆ ಬಳಸುವ ವಾಟ್ಸ'ಅಪ್'ನಂತಹ ಸಾಮಾಜಿಕ ಮಾಧ್ಯಮಗಳಲ್ಲಿಯೂ ಏಕೀಕೃತ ಪಾವತಿಗಳ ಸಂಪರ್ಕ ವೇದಿಕೆ(ಯುಪಿಐ) ನಗದು ವ್ಯವಹಾರವನ್ನು ಕೈಗೊಳ್ಳಬಹುದು.
ಡಿಜಿಟಲ್ ಪಾವತಿ ವ್ಯವಹಾರವನ್ನು ನಿಯಂತ್ರಿಸುವ 'ಭಾರತೀಯ ರಾಷ್ಟ್ರೀಯ ಪಾವತಿಗಳ ಸಂಸ್ಥೆ'(ಎನ್'ಪಿಸಿಐ) ಫೇಸ್'ಬುಕ್ ಮಾಲಿಕತ್ವದ ವಾಟ್ಸ್'ಪ್ ಮೂಲಕ ನಗದು ವರ್ಗಾವಣೆ ಮಾಡುವ ಅವಕಾಶಕ್ಕೆ ಅನುಮತಿ ನೀಡಿದೆ. ವಾಟ್ಸ್'ಅಪ್ ಮೂಲಕ ನಗದು ವರ್ಗಾವಣೆ ಸಾಧ್ಯವಾಗುವ ಕಾರಣ ಇನ್ನು ಮುಂದೆ ಸಾಮಾನ್ಯ ಜನರು ತಮ್ಮ ಬ್ಯಾಂಕಿಂಗ್ ವ್ಯವಹಾರವನ್ನು ಸುಲಭವಾಗಿ ಪಾವತಿಸಲು ಅನುಕೂಲವಾಗಲಿದೆ.
ವಾಟ್ಸ'ಅಪ್ ಹಾಗೂ ಫೇಸ್'ಬುಕ್ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದ್ದು, ಆರ್'ಬಿಐನಿಂದ ಅಧಿಕೃತ ಆದೇಶ ಬರಬೇಕಿದೆ ಎಂದು ಎನ್'ಪಿಸಿಐ ಸಿಇಒ ಎಪಿ ಹೋಟ ತಿಳಿಸಿದ್ದಾರೆ. ಡಿಜಿಟಲ್ ವ್ಯವಹಾರ ಕೈಗೊಳ್ಳಲು ಆಕ್ಸಿಸ್, ಐಸಿಐಸಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಕೆಲವು ಪ್ರಮುಖ ಬ್ಯಾಂಕ್'ಗಳ ಜೊತೆ ವ್ಯಾಟ್ಸ್'ಪ್ ಮಾತುಕತೆ ನಡೆಸುತ್ತಿದೆ.
ಎನ್'ಸಿಪಿಐ ನೀಡಿರುವ ಅಂಕಿಅಂಶಗಳಂತೆ ಕಳೆದ ತಿಂಗಳು ಯುಪಿಐ ಮೂಲಕ 3 ಸಾವಿರ ಕೋಟಿ ರೂ. ಡಿಜಿಟಲ್ ವ್ಯವಹಾರ ನಡೆದಿದೆ. ಇದು ಉಳಿದ ವ್ಯವಹಾರಕ್ಕೆ ಹೋಲಿಸಿದರೆ ಕೇವಲ ಶೇ.22 ಮಾತ್ರ. ಯುಪಿಐನಿಂದ 24/7 ಡಿಜಿಟಲ್ ವ್ಯವಹಾರ ನಡೆಸಬಹುದಾಗಿದ್ದು, ಪಾಸ್'ವರ್ಡ್, ಕಾರ್ಡ್ ಸಂಖ್ಯೆ ಸೇರಿದಂತೆ ಎಲ್ಲ ಮಾಹಿತಿಯನ್ನು ಗೌಪ್ಯವಾಗಿಡಲಾಗುತ್ತದೆ ಎಂಬ ಭರವಸೆ ಎನ್'ಪಿಸಿಐ ನೀಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.