
ಚೆನ್ನೈ (ಜು.12): ತಮಿಳಿನಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಿರುವ ಕಮಲ್ ಹಾಸನ್ ಹಾಗೂ ಬಿಗ್’ಬಾಸ್ ಸ್ಪರ್ಧಿಗಳನ್ನು ಬಂಧಿಸಬೇಕೆಂದು ಹಿಂದೂ ಮಕ್ಕಲ್ ಕಾಟ್ಚಿ ಎನ್ನುವ ಹಿಂದೂ ಸಂಘಟನೆಯೊಂದು ಒತ್ತಾಯಿಸಿದೆ. 7 ಕೋಟಿ ತಮಿಳರ ಭಾವನೆಗಳಿಗೆ ರಿಯಾಲಿಟಿ ಶೋ ನೋವುಂಟು ಮಾಡಿದೆ. ಕಳೆದ ಪಿಸೋಡ್’ನಲ್ಲಿ ಸ್ಪರ್ಧಿಗಳು ಪರಸ್ಪರ ಮೂತ್ರವನ್ನು ಎರಚಿಕೊಂಡು ಅಸಭ್ಯವಾಗಿ ವರ್ತಿಸಿದ್ದರು ಎಂದು ಸಂಘಟನೆ ಆರೋಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು ಕಮಲ್ ಹಾಸನ್’ರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಬಿಗ್’ಬಾಸ್’ನಲ್ಲಿ ತೋರಿಸುವ ಅಂಶಗಳು ಭಾರತೀಯ ಸಂಸ್ಕೃತಿಗೆ ವಿರುದ್ಧವಾದುದು. ಇದಕ್ಕೆ ಯಾರೂ ಬೆಂಬಲಿಸುವುದಿಲ್ಲ. ಹಿಂದೊಮ್ಮೆ ಕಮಲ್ ಹಾಸನ್ ಮಹಾಭಾರತ ಮತ್ತು ಹಿಂದೂ ಸಂಸ್ಕೃತಿಯ ವಿರುದ್ಧ ಮಾತನಾಡಿದ್ದರು. ಈ ಶೋನಲ್ಲಿ ಮುಂದೆಯೂ ಕೂಡಾ ಮಾತನಾಡಲಿದ್ದಾರೆ. ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಲಿದ್ದಾರೆ ಎಂದು ಸಂಘಟನೆ ಹೇಳಿದೆ.
ಬಿಗ್ ಬಾಸ್ ಎನ್ನುವ ರಿಯಾಲಿಟಿ ಶೋ ಸಾಮಾಜಿಕ ಮೌಲ್ಯಗಳನ್ನು ಹಾಳು ಮಾಡುತ್ತಿದೆ. ಎಲ್ಲಾ ಶಾಲೆಗಳನ್ನು ಹಾಡುವ ಹಾಡೊಂದನ್ನು ಅಣಕು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.